ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್

Public TV
2 Min Read
lakshmi hebbalkar 1 1

ಬೆಳಗಾವಿ: 24 ಗಂಟೆ ರಾಮನ ಭಜನೆ ಮಾಡೋರು, ದೇವರ ಪೂಜಿಸುವವರ ಹೃದಯ ಇಷ್ಟೊಂದು ಕಠೋರವಾಯ್ತಾ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.

ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅಂತ್ಯಕ್ರಿಯೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಂತೋಷ್‌ ತಾಯಿ, ಪತ್ನಿ ಕುಟುಂಬಸ್ಥರು ಊಟ, ನಿದ್ರೆ ಇಲ್ಲದೇ ಸಂಕಷ್ಟದಲ್ಲಿದ್ದರು. ಹೀಗಾಗಿ ಸಮಾಧಾನದಿಂದ ಸಂತೋಷ್‌ ಅಂತ್ಯಕ್ರಿಯೆ ನಡೆಯಲಿ ಅಂತಾ ಸುಮ್ಮನಾಗಿದ್ದೇವೆ ಎಂದರು.

BJP FLAG

ಸಂತೋಷ್‌ ಪಾಟೀಲ್ ಬಿಜೆಪಿ ಕಾರ್ಯಕರ್ತ. ಬಿಎಸ್‌ವೈ ಹಾಗೂ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಆದರೆ ಸೌಜನ್ಯಕ್ಕೂ ಹಾಗೂ ಮಾನವೀಯತೆ ದೃಷ್ಟಿಯಿಂದಲೂ ಯಾವೊಬ್ಬ ಬಿಜೆಪಿ ಮುಖಂಡನೂ ಇಲ್ಲಿ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಬಿಜೆಪಿ ಅವರು ಇಷ್ಟೊಂದು ಕಠೋರ ಆಗಿ ಬಿಟ್ರಾ ಎಂದು ಹರಿಹಾಯ್ದರು. ಇದನ್ನೂ ಓದಿ: ಪ್ರಾಥಮಿಕ ತನಿಖೆ ಮುಗಿಯುವವರೆಗೆ ಈಶ್ವರಪ್ಪ ವಿರುದ್ಧ ಕ್ರಮವಿಲ್ಲ: ಸಿಎಂ

ಕೊನೆಪಕ್ಷ ಸಂತೋಷ್ ಕುಟುಂಬಸ್ಥರಿಗೆ 4 ಕೋಟಿ ಕಾಮಗಾರಿ ಬಿಲ್ ತಕ್ಷಣ ರಿಲೀಸ್ ಮಾಡಿ, 1 ಕೋಟಿ ಪರಿಹಾರ ನೀಡಬೇಕು. ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು  ಮನವಿ ಮಾಡಿದರು.

santosh patil

ನಿನ್ನೆ ಸಂತೋಷ್‌ ಮೃತದೇಹವನ್ನು ಪೋಸ್ಟಮಾರ್ಟ್‌ಂ ಮಾಡಿದ್ದರು. ಸಂತೋಷ್ ಮೊಬೈಲ್‍ನಲ್ಲಿ ಎಲ್ಲಾ ಸಾಕ್ಷ್ಯಗಳು ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮೇಲೆ ಕೇಸ್ ದಾಖಲಾಗಿದೆ. ಆದರೆ ಅವರನ್ನು ಈವರೆಗೂ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ಹೈಡ್ರಾಮಾ

ಅವರನ್ನು ಬಂಧಿಸಲು ಮೊಬೈಲ್‍ನಲ್ಲಿ ಎಲ್ಲಾ ಸಾಕ್ಷಿ ಇದೆ. ಸಾಕ್ಷಿ ಏನಾದರೂ ತಿರುಚಲು ನಿಂತಿದ್ದೀರಾ? ಸಂತೋಷ್ ಮೃತರಾಗಿದ್ದಾರೆ. ಅವನು ಮರಳಿ ಬರುವುದಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈಶ್ವರಪ್ಪ ಅವರನ್ನು ಮಂತ್ರಿಗಿರಿಯಿಂದ ವಜಾ ಗೊಳಿಸುವುದಷ್ಟೇ ಅಲ್ಲ, ಈಶ್ವರಪ್ಪ ಅವರಿಗೆ ಶಿಕ್ಷೆ ಆಗಬೇಕು. ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

BSY 1

ಮಾಜಿ ಸಿಎಂ ಬಿಎಸ್‍ವೈ ಗಮನಕ್ಕೆ ಎಲ್ಲಾ ಇದೆ. ಬಿಎಸ್‍ವೈ ಕಟ್ಟಾ ಅಭಿಮಾನಿ, ನಮ್ಮ ಸಮಾಜದ ಹಿರಿಯ ಮುಖಂಡರು ಅಂತಾ ಅವರ ಹೆಸರು ಮೆಸೇಜ್‍ನಲ್ಲಿ ಉಲ್ಲೇಖಿಸಿದ್ದಾರೆ. ಯಡಿಯೂರಪ್ಪರವರು ಅಂತ್ಯಕ್ರಿಯೆಗೆ ಬರಬಹುದಾಗಿತ್ತು. ಹಿರಿಯರಿದ್ದಾರೆ ಇನ್ನೊಬ್ಬರನ್ನಾದರೂ ಕಳಿಸಬಹುದಾಗಿತ್ತು. ಅವರಿಗೆ ಪಕ್ಷ ಮುಖ್ಯ ಅಲ್ಲ, ರಾಜಕಾರಣ ಮುಖ್ಯ. ಈ ಹೊಲಸು ರಾಜಕಾರಣಕ್ಕೆ ಅದೆಷ್ಟು ಜನರ ಬಲಿ ಪಡೀತಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

lakshmi hebbalkar 1 2

ಜಾತ್ಯಾತೀತವಾಗಿ ನಾವು ಒಂದೇ ಕೇಳ್ತಿದೀವಿ ಅವನು ಬಿಜೆಪಿ ಕಾರ್ಯಕರ್ತರೀ. ಅವನು ಸಾವನ್ನಪ್ಪಿದಾಗ ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದ. ಅಷ್ಟೊಂದು ಬಿಜೆಪಿ ಕಟ್ಟರ್ ಅಭಿಮಾನಿಗೆ ನಿಮ್ಮ ಮನಸ್ಸು ಕರಗಲಿಲ್ವಾ? ನಿಮ್ಮ ಹೊಲಸ್ಸು ರಾಜಕಾರಣ ಬದಿಗಿಡಿ ಅವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *