ಬೆಂಗಳೂರು: ರಾಜೀನಾಮೆ ವಿಳಂಬ ಖಂಡಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್, ಇದೀಗ ಈಶ್ವರಪ್ಪ ಬಂಧಿಸಬೇಕೆಂದು ಅಹೋರಾತ್ರಿ ಧರಣಿ ಕೈಗೊಂಡಿದೆ.
Advertisement
24 ಗಂಟೆ ಪ್ರತಿಭಟನೆ ಘೋಷಣೆ ಮಾಡಿರೋದ್ರಿಂದ ಆಹೋರಾತ್ರಿ ಧರಣಿಯನ್ನು ಕೈಬಿಡಲ್ಲ. ಈಶ್ವರಪ್ಪ ವಿರುದ್ಧ ಹೊಸದಾಗಿ ಎಫ್‍ಐಆರ್ ಹಾಕಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ
Advertisement
Advertisement
ಈಶ್ವರಪ್ಪ ವಿರುದ್ಧ ಬ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವವರೆಗೆ ಹೋರಾಟ ಕೈಬಿಡಲ್ಲ. ರಾಜೀನಾಮೆ ಕೊಟ್ಟ ಕೂಡಲೇ ಹಿಂದೆ ಸರಿದರೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗಲ್ಲ. ಆದ್ದರಿಂದ ಹೋರಾಟ ಮುಂದುವರಿಸಿವುದು ಕೈ ಪಾಳಯದ ಲೆಕ್ಕಾಚಾರವಾಗಿದೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ
Advertisement
ರಾಜ್ಯದ ಉದ್ದಗಲಕ್ಕೂ ಈ ಸಂಬಂಧ ಹೋರಾಟ ನಡೆಸಲು ಕೈ ಪಾಳಯದ ನಿರ್ಧಾರ ಮಾಡಿದೆ. ಈಶ್ವರಪ್ಪ ವಿರುದ್ಧ ಆರೋಪ ಬಂತು ಈಶ್ವರಪ್ಪ ರಾಜೀನಾಮೆ ಕೊಟ್ಟರು ಅಲ್ಲಿಗೆ ಎಲ್ಲವೂ ಮುಗಿದು ಹೋಯ್ತು ಎಂಬಂತಾಗುತ್ತದೆ. ಅದರ ಬದಲು ಈಶ್ವರಪ್ಪ ವಿರುದ್ಧ ಬ್ರಷ್ಟಾಚಾರ ಕಾಯ್ದೆ ಅಡಿ ದೂರು ದಾಖಲಾಗಿ ಅವರ ಬಂಧನವಾದರೆ ಸರ್ಕಾರದ ವಿರುದ್ಧದ 40% ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗುತ್ತದೆ. ಅಲ್ಲದೆ ಇದೆನ್ನೆ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮತ್ತಷ್ಟು ಆರೋಪ ಮಾಡಬಹುದು ಹೋರಾಟ ರೂಪಿಸಬಹುದು. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ಈಶ್ವರಪ್ಪ ಬಂಧಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲು ತೀರ್ಮಾನಿಸಿದೆ.