ಉಡುಪಿ: ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ವರದಿಯ ಬಳಿಕ ಸಂತೋಷ್ ಸಾವಿಗೆ ನಿಖರ ಕಾರಣ ಸಿಗಲಿದೆ ಎಂದು ಉಡುಪಿ ಎಸ್‌ಪಿ ವಿಷ್ಣುವರ್ಧನ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂತೋಷ್ ಅವರ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಮಂಗಳೂರಿನಿಂದ ಎಫ್‌ಎಸ್ಎಲ್ ತಂಡ ಬರುತ್ತಿದೆ. ಮೃತರ ಸಂಬಂಧಿಕರು ಬರುತ್ತೇವೆ ಎಂದು ಹೇಳಿದ್ದಾರೆ. ಸಂಬಂಧಿಕರು ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್ – ಆತ್ಮಹತ್ಯೆಗೆ ಕಾರಣ ಏನು?
Advertisement
ಲಾಡ್ಜಿನ ಕೊಠಡಿಯನ್ನು ಈಗಾಗಲೇ ಸೀಲ್ ಮಾಡಿದ್ದೇವೆ. ಎಫ್ಎಸ್ಎಲ್ ತಂಡ ಮತ್ತು ಕುಟುಂಬಸ್ಥರು ಬಂದ ನಂತರ ಕೊಠಡಿಯನ್ನು ತೆರೆಯುತ್ತೇವೆ. ಸಂಬಂಧಿಕರು ಬಂದ ನಂತರ ಉಡುಪಿಯಲ್ಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸಂಬಂಧಿಕರು ಬರುವ ತನಕ ನಾವು ಯಾವುದೇ ವಿಧಿ ವಿಧಾನ ಮಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ