ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ರಾಜು ಕಪನೂರ್ ಆ್ಯಂಡ್ ಗ್ಯಾಂಗ್‌ಗೆ 3 ದಿನ ಸಿಐಡಿ ಕಸ್ಟಡಿಗೆ ನೀಡಿದೆ.ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ
Advertisement
ಬೀದರ್‌ನ ಜೆಎಮ್‌ಎಫ್‌ಸಿ ಕೋರ್ಟ್‌ನ ನ್ಯಾಯಾಧೀಶ ರಾಮಮೂರ್ತಿ.ಎನ್ ಆದೇಶ ಹೊರಡಿಸಿದ್ದು, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ, ಗೋರಕ್ ನಾಥ್, ನಂದಕುಮಾರ ನಾಗಭುಂಜಗೆ, ರಾಮಗೌಡಾ ಪಾಟೀಲ್ ಹಾಗೂ ಸತೀಶ್ ರತ್ನಾಕರ್ ಸೇರಿದಂತೆ ಎಲ್ಲಾ 5 ಆರೋಪಿಗಳಿನ್ನು ಸಿಐಡಿ ಕಸ್ಟಡಿಗೆ ನೀಡಿದ್ದಾರೆ.
Advertisement
ಇದಕ್ಕೂ ಮುನ್ನ 5 ದಿನ ಸಿಐಡಿ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ಇಂದು (ಜ.15) ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ತೀವ್ರ ವಿಚಾರಣೆ ನಡೆಸಲಿದ್ದೇವೆ ಎಂದು ವಾದ ಮಂಡಸಿದ್ದು, ಕೋರ್ಟ್ ಸಿಐಡಿ ಕಸ್ಟಡಿಗೆ ನೀಡಿ, ಆದೇಶ ಹೊರಡಿಸಿದೆ.ಇದನ್ನೂ ಓದಿ: ಭಕ್ತ ಸಾಗರದಲ್ಲಿ ಕೊಪ್ಪಳ ಗವಿಸಿದ್ದೇಶ್ವರನ ತೇರು