ಮಡಿಕೇರಿ: ಕೊಡಗಿನ ಶಾಸಕರಿಗೂ ಪರ್ಸೆಂಟೇಜ್ ಹೋಗುತ್ತೆ ಕಮಿಷನ್ ತೆಗೆದುಕೊಳ್ಳಲ್ಲ ಎಂದರೆ ಅದನ್ನು ಸಾಬೀತು ಪಡಿಸಲಿ ಎಂದು ಕೊಡಗಿನ ಶಾಸಕರಿಗೆ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ರವಿಚಂಗಪ್ಪ ನೇರ ಸವಾಲು ಹಾಕಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರಿಗೂ ಪಸೆರ್ಂಟೇಜ್ ಹೋಗುತ್ತದೆ. ಸೋಮವಾರ ಕೆ.ಜಿ ಬೋಪಯ್ಯ ಪಿಆರ್‍ಇಡಿ ಕಚೇರಿಗೆ ಬರಬೇಕು. ಅಲ್ಲಿ ನಾವು ಕಮಿಷನ್ ತಗೊಳ್ಳಲ್ಲ ಎನ್ನೋದನ್ನ ಸಾಬೀತು ಪಡಿಸಬೇಕು ಎಂದು ಸವಾಲ್ ಹಾಕಿದ್ದಾರೆ. 2019 ರಿಂದ ಇದುವರೆಗೆ ಆಗಿರುವ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಜಿಲ್ಲೆಯ ಗುತ್ತಿಗೆದಾರರಿಗೆ 45 ಕೋಟಿ ರೂ. ಬಾಕಿ ಇದೆ. ಒಂದು ರೂಪಾಯಿ ಕಮಿಷನ್ ಪಡೆಯದೆ ಅದನ್ನು ಬಿಡುಗಡೆ ಮಾಡಿಸಿಕೊಡಲಿ. ಅವರದೇ ಪಕ್ಷದ ಶಾಸಕ ಅಪ್ಪಚ್ಚು ರಂಜನ್ ಇದ್ದಾರೆ. ಅವರು ಬೆಂಗಳೂರಿಗೆ ಬೋಪಯ್ಯರನ್ನು ಕರೆದುಕೊಂಡು ಹೋಗಲಿ ಎಂದರು. ಇದನ್ನೂ ಓದಿ: ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಇಬ್ಬರು ಶಾಸಕರು ಸೇರಿ ಬಿಲ್ ಮಾಡಿಸಲಿ ಎಂದು ಸವಾಲ್ ಹಾಕಿದ ಅವರು, ಒಂದು ತಿಂಗಳಲ್ಲಿ ಬಿಲ್ ಮಾಡಿಸಲಿ ನೋಡೋಣ ಆಗ ನಾವು ಮಾಡಿರುವ ಆರೋಪ ವಾಪಸ್ ಪಡೆಯುತ್ತೇವೆ ಎಂದರು. ಅಷ್ಟೇ ಅಲ್ಲದೇ ಈ ಹಿಂದಿನಿಂದಲೂ ಕಮಿಷನ್ ಇದ್ದೇ ಇತ್ತು. ಆದರೆ ಆಗ 10 ಪರ್ಸೆಂಟೇಜ್ ಕಮಿಷನ್ ಇತ್ತು. ಅದನ್ನು ಮೈಸೂರಿಗೆ ಬಂದಿದ್ದ ಮೋದಿಯವರೇ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ದಸ್ ಪರ್ಸೆಂಟೇಜ್ ಕಾ ಸರ್ಕಾರ ಹೈ ಅಂತ ಹೇಳಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ 40 ಕಮಿಷನ್ ಇದೆ. ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಮೂರುಪಟ್ಟು ಕಮಿಷನ್ ಹೆಚ್ಚಿಸಿದರು. ಇದೀಗಾ ಗುತ್ತಿಗೆದಾರರು 40 ಪಸೆರ್ಂಟ್ ಕಮಿಷನ್ ಕೊಡಬೇಕು. ಉಳಿದ ದುಡ್ಡಿನಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಇದರಿಂದ ಗುತ್ತಿಗೆದಾರರಿಗೆ ತೀವ್ರ ಸಮಸ್ಯೆ ಆಗಿದೆ ಎಂದು ಗುತ್ತಿಗೆದಾರರ ಸಂಘದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?