ಬೆಂಗಳೂರು: ನಗರದಲ್ಲಿ ಕಾಂಟ್ರಾಕ್ಟರೊಬ್ಬರು ರಿಯಲ್ ಹೀರೋ ಆಗಿದ್ದಾರೆ. 50 ಲಕ್ಷದಷ್ಟು ಬೆಲೆ ಬಾಳುವ ವಸ್ತುಗಳು ಹಾಗೂ ನಗದು ಹಣವನ್ನ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಕಾಂಟ್ರಾಕ್ಟರ್ ಎಂ.ಹೆಚ್ ಕೃಷ್ಣಮೂರ್ತಿಗೆ ಎಲ್ಲಡೆ ಅಭೂತಪೂರ್ವ ಶ್ಲಾಘನೆ ವ್ಯಕ್ತವಾಗುತ್ತಿದೆ.
Advertisement
ಅಕ್ಟೊಬರ್ 7ರಂದು ರಾಮಮೂರ್ತಿ ನಗರದ ಕಸ್ತೂರಿ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿದಿತ್ತು. ಈ ಕಟ್ಟಡ ತೆರವು ಕಾರ್ಯಾಚರಣೆ ನಡೆಸಲು ಪಾಲಿಕೆಯಿಂದ ಗುತ್ತಿಗೆ ಪಡೆದಿದ್ದ ಪೀಣ್ಯದ ಶ್ರೀ ಚೈತನ್ಯ ಸರ್ವಿಸಸ್ ಮಾಲೀಕ ಕೃಷ್ಣಮೂರ್ತಿ, ಸತತ 72 ಘಂಟೆಗಳಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಕಟ್ಟಡ ತೆರವು ಕಾರ್ಯಚರಣೆ ವೇಳೆ ಸಿಕ್ಕಿದ್ದ ಆಭರಣ, ನಗದು ಹಣ, ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್ ಸೇರಿ ಇತರೆ ವಸ್ತುಗಳನ್ನು ಕೃಷ್ಣಮೂರ್ತಿ ಹಿಂದಿರುಗಿಸಿದ್ದಾರೆ.
Advertisement
Advertisement
ಕೃಷ್ಣಮೂರ್ತಿ ಅವರ ಪ್ರಮಾಣಿಕತೆಗೆ ಬಿಬಿಎಂಪಿಯ ಪೂರ್ವ ವಲಯ ಆಯುಕ್ತ ಮನೋಜ್ ಜೈನ್, ಜಂಟಿ ಆಯುಕ್ತ ಕೆ.ಆರ್ ಪಲ್ಲವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎರಡು ಕುಟುಂಬಗಳಿಂದ 1 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ರು. ಈ ಪೈಕಿ 50 ಲಕ್ಷದಷ್ಟು ಹಣ ಮಾತ್ರ ಮರಳಿ ಸಿಕ್ಕಿದೆ. ತಮ್ಮ ವಸ್ತುಗಳನ್ನ ಹಸ್ತಾಂತರಿಸಿದ ಕೃಷ್ಣಮೂರ್ತಿಗೆ ಎರಡು ಕುಟುಂಬಗಳು ಕೃತಜ್ಞತೆ ಸಲ್ಲಿಸಿವೆ. ಇದನ್ನೂ ಓದಿ: ರೈಲಿನಲ್ಲಿ ಮರೆತ 7.31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದ ರೈಲ್ವೇ ಭದ್ರತಾ ಪಡೆ
Advertisement
ನಿಮ್ಮ ಪ್ರಮಾಣಿಕತೆಗೆ ನಮ್ಮ ಸಲಾಂ, ಯಾವತ್ತು ನಿಮ್ಮನ್ನ ಮರೆಯೋದಿಲ್ಲ ಎಂದು ವಸ್ತುಗಳನ್ನ ಪಡೆದ ಎರಡು ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ಸತತ 72 ಘಂಟೆಗಳ ಬಳಿಕ ಬಹುಮಹಡಿ ಕಟ್ಟಡ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಬಹುಮಹಡಿ ಕಟ್ಟಡದ ಪಕ್ಕದಲ್ಲಿದ್ದ ಮನೆಗಳಿಗೆ ಹಾನಿಯಾಗದಂತೆ ತೆರವು ಕಾರ್ಯಾಚರಣೆಯಾಗಿದೆ.