ಬಳ್ಳಾರಿ: ಪ್ರತೀ ಶಾಲೆಯಲ್ಲಿ ಕಡ್ಡಾಯವಾಗಿ ಶೌಚಾಲಯ (Toilet) ಇರಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಈ ಆದೇಶ ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣವಾಗಿದ್ದರೂ ಬಿಲ್ (Bill) ಪಾವತಿ ಮಾಡದ್ದಕ್ಕೆ ಶಾಲೆಯೊಂದರಲ್ಲಿ ಗುತ್ತಿಗೆದಾರ ಟಾಯ್ಲೆಟ್‌ಗೆ ಬೀಗ ಹಾಕಿದ್ದಾನೆ.
ಲಕ್ಷಾಂತರ ರೂ. ಖರ್ಚು ಮಾಡಿ ಒಂದು ವರ್ಷದ ಹಿಂದೆ ಶೌಚಾಲಯ ನಿರ್ಮಿಸಿದ್ದರೂ ಕೆ ವೀರಾಪೂರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಬಯಲು ಶೌಚಾಲಯವೇ ಗತಿ ಎನ್ನುವಂತಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ – ಬೃಹತ್ ಶೋಭಾಯಾತ್ರೆಗೆ ಶಾಂತಿಯುತ ತೆರೆ
ಗ್ರಾಮ ಪಂಚಾಯತ್ (Village Panchayat) ವತಿಯಿಂದ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಪಂಚಾಯತ್ ಗುತ್ತಿಗೆದಾರನಿಗೆ 5.20 ಲಕ್ಷ ರೂ. ಪಾವತಿಸಬೇಕಿದೆ. ಆದರೆ ಪಂಚಾಯತ್ ಪಾವತಿಸದ ಕಾರಣ ಇನ್ನೂ ಶೌಚಾಲಯದ ಬಳಕೆ ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ.
ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಮನೆಯಲ್ಲಿ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಹೆಣ್ಣು ಮಕ್ಕಳು ಎಲ್ಲಿಗೆ ಹೋಗೋದು ಎಂದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ.
ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ಬಯಲು ಶೌಚಾಲಯಕ್ಕೆ ತೆರಳುತ್ತಿರುವ ವಿದ್ಯಾರ್ಥಿನಿಯರು, ಕೂಡಲೇ ಶೌಚಾಲಯವನ್ನು ತೆರೆಯುವಂತೆ ಆಗ್ರಹಿಸಿದ್ದಾರೆ.

