ಬೆಂಗಳೂರು: ನನ್ನ ಕೊಲೆಗೆ ಸುಪಾರಿ ಕೊಡಲಾಗಿತ್ತು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೋರ್ಟಿಗೆ ಹೇಳಿದ್ದಾರೆ.
ಒಸ್ಮಾನಾಬಾದ್ ಸಕ್ಕರೆ ಕೈಗಾರಿಕೆಯ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದಕ್ಕೆ ನನ್ನ ಕೊಲೆಗೆ ಸುಪಾರಿ ಕೊಡಲಾಗಿದೆ ಎಂದು ಮುಂಬೈ ಸಿಬಿಐ ಕೋರ್ಟ್‍ಗೆ ಹಜಾರೆ ಹೇಳಿದ್ದಾರೆ.
Advertisement
ಇಂದು ಅಣ್ಣಾ ಹಾಜರೆ ಅವರು ಮುಂಬೈನ ಸಿಬಿಐ ಕೋರ್ಟಿಗೆ ಹಾಜರಾಗಿದ್ದರು. 2006 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಕಾಂಗ್ರೆಸ್ ನಾಯಕ ಪವನ್ ರಾಜೇ ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಆಗಮಿಸಿದ್ದರು. ನಿಂಬಾಳ್ಕರ್ ಹತ್ಯೆ ಪ್ರಕರಣದಲ್ಲಿ ಪದ್ಮ ಸಿನ್ಹಾ ಪಾಟೀಲ್ ಪ್ರಮುಖ ಆರೋಪಿಯಾಗಿದ್ದು, ಇವರು ಒಸ್ಮಾನಾಬಾದ್ ಸಕ್ಕರೆ ಕಾರ್ಖಾನೆಯೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಈ ಕಾರ್ಖಾನೆ ಮಹಾರಾಷ್ಟ್ರದ ಎನ್‍ಸಿಪಿ ನಾಯಕ ಒಸ್ಮಾನಾಬಾದ್‍ಗೆ ಸೇರಿತ್ತು.
Advertisement
Advertisement
ಅಂದಹಾಗೇ ಪ್ರಕರಣದಲ್ಲಿ ಮೃತ ನಿಂಬಾಳ್ಕರ್ ಅವರ ಪತ್ನಿ ಆನಂದಿದೇವಿ ಅವರು ಅಣ್ಣಾ ಹಜಾರೆ ಅವರ ಸಾಕ್ಷಿಯನ್ನು ಪರಿಗಣಿಸಲು ಮನವಿ ಮಾಡಿದ್ದರು. ಹಜಾರೆ ಅವರಿಗೆ ಕೊಲೆ ಬಗ್ಗೆ ಮಾಹಿತಿ ಇತ್ತು ಎಂದು ಹೇಳಿದ್ದಾರೆ. ಆದರೆ ಹೈ ಕೋರ್ಟ್ ಈ ಮನವಿಯನ್ನು ತಿರಸ್ಕರಿತ್ತು. ಸದ್ಯ ಸುಪ್ರೀಂ ಕೋರ್ಟ್ ನಿಂಬಾಳ್ಕರ್ ಪತ್ನಿರ ಮನವಿಯನ್ನು ಪರಿಗಣಿಸಿ ಸಿಬಿಐಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಸಿಬಿಐ ಮುಂದೇ ಹಾಜರಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಕ್ಕೆ ತಮ್ಮ ಕೊಲೆ ಮಾಡಲು ಸುಪಾರಿ ನೀಡಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾಗಿ, ಮಹಾರಾಷ್ಟ್ರ ಸಿಎಂ, ಪ್ರಧಾನಿಗಳಿಗೂ ದೂರು ನೀಡಿದ್ದಾಗಿ ತಿಳಿಸಿದ್ದಾರೆ.