ತಿರುವನಂತಪುರಂ: ಡ್ರಗ್ಸ್ ನಿಗ್ರಹ ದಳ ಹಾಗೂ ಅಬಕಾರಿ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ. ಡ್ರಗ್ಸ್ ಅನ್ನು ಕೊಚ್ಚಿಯ ಕೊರಿಯರ್ ಸೆಂಟರ್ ನಲ್ಲಿ ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಆಧರಿಸಿ ಕೇರಳದ ಮಾದಕ ದ್ರವ್ಯ ನಿಗ್ರಹ ಪಡೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಕೊಚ್ಚಿಯ ಖಾಸಗಿ ಕೊರಿಯರ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಮಾದಕ ದ್ರವ್ಯದ 64 ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
Kochi: Excise Enforcement and Anti Narcotics cell seized 32 kg of MDMA from a courier office. Source of the consignment hasn't been detected yet. Investigation underway. #Kerala pic.twitter.com/uGTvgv4abL
— ANI (@ANI) September 29, 2018
Advertisement
ಡ್ರಗ್ಸ್ ದಂಧೆಕೋರರು ಪ್ಯಾಕೆಟ್‍ಗಳನ್ನು ಬಟ್ಟೆಯಲ್ಲಿ ಸುತ್ತಿ ಬಾಕ್ಸ್‍ಗಳಲ್ಲಿ ಬಚ್ಚಿಟ್ಟಿದ್ದರು. ಅಲ್ಲದೇ ಸಾಗಾಣಿಕೆಯ ಹಿಂದೆ ಕೊರಿಯರ್ ಸೆಂಟರ್‍ನ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ಎರ್ನಾಕುಲಂನ ವಿಭಾಗೀಯ ಉಪ ಅಬಕಾರಿ ಆಯುಕ್ತ ಎ.ಎಸ್.ರಂಜಿತ್ ಹೇಳಿದ್ದಾರೆ.
Advertisement
ಅಬಕಾರಿ ಆಯುಕ್ತ ರಿಶಿ ರಾಜ್ ಸಿಂಗ್ ಮಾತನಾಡಿ, ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಹೊಂದಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಭಾರೀ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೇ ದಂಧೆಕೋರರು ಯಾವ ರೀತಿ ಇವುಗಳನ್ನು ರಫ್ತು ಮಾಡುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿಯಲಿದೆ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv