ರಾಯಚೂರು: ಸಾಲು ಸಾಲು ರಜೆಗಳ ಹಿನ್ನೆಲೆ ಮಂತ್ರಾಲಯ (Mantralaya) ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ಭಕ್ತಸಾಗರ ಹರಿದು ಬಂದಿದೆ. ಕ್ರಿಸ್‌ಮಸ್ ರಜೆ, ಹೊಸವರ್ಷಾಚರಣೆಗೆ ದಿನಗಣನೆ, ಅಮವಾಸ್ಯೆ ಹಿನ್ನೆಲೆ ರಾಯರ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಸಾವಿರಾರು ಭಕ್ತರ ಭೇಟಿಯಿಂದ ಮಂತ್ರಾಲಯ ರಾಯರ ಮಠ ತುಂಬಿ ತುಳುಕುತ್ತಿದ್ದು, ಮಠದ ರೂಂಗಳಿಗೆ ಆನ್‌ಲೈನ್ ಬುಕಿಂಗ್ ಬಂದ್ ಮಾಡಲಾಗಿದೆ. ಕೇವಲ ಆಫ್‌ಲೈನ್ ಬುಕಿಂಗ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಭಕ್ತರು ಕೋಣೆಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್ ಎಚ್ಚರಿಕೆ
ಕಳೆದ ನಾಲ್ಕೈದು ದಿನಗಳಿಂದ ಮಂತ್ರಾಲಯ ಮಠದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಹಿನ್ನೆಲೆ ಡಿ.25 ರಿಂದ ಜ.2 ರವರೆಗೆ ರೂಂಗಳ ಆನ್‌ಲೈನ್ ಬುಕ್ಕಿಂಗ್ ಬಂದ್ ಮಾಡಲಾಗಿದ್ದು, ಜ.1ರ ವರೆಗೆ ಇದೇ ರೀತಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಶ್ರೀಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಮಠದ ಪ್ರಾಂಗಣ ಹಾಗೂ ರಾಜಬೀದಿಯಲ್ಲಿ ಎಲ್ಲೂ ನೋಡಿದರೂ ರಾಯರ ಭಕ್ತರೇ ಕಾಣಸಿಗುತ್ತಿದ್ದಾರೆ.ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸ್ಥಳ ಪರಿಶೀಲನೆ