ಬೆಂಗಳೂರು: ಸಿಲಿಕಾನ್ ಸಿಟಿಯಿಂದ (Silicon City) 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ಲೈಓವರ್, ಆಕ್ಸಿಡೆಂಟ್ ಹಾಟ್‌ಸ್ಪಾಟ್ ಆಗಿ ಬದಲಾಗಿ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಆದರೆ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪರಿಣಾಮ ಪ್ಲೈಓವರ್ ಆಕ್ಸಿಡೆಂಟ್ ಝೋನ್ (Accindent Zone) ಆಗಿ ಬದಲಾಗುತ್ತಿದೆ.
ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳ ಪೈಕಿ ಯಶವಂತಪುರ ಫ್ಲೈಓವರ್ ಕೂಡ ಒಂದು. ನಗರದ ಪ್ರಮುಖ ಹೆದ್ದಾರಿಗೆ ಸಂಪರ್ಕಿಸುವ ಈ ಫ್ಲೈಓವರ್ ಕಳೆದ ಕೆಲ ದಿನಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ಫ್ಲೈಓವರ್ ಮೇಲೆ ಅಪಘಾತಗಳು ಒಂದರ ಹಿಂದೆ ಒಂದರಂತೆ ಸಂಭವಿಸುತ್ತಿವೆ. ಹೀಗಿದ್ದರೂ ಫ್ಲೈಓವರ್ ಮೇಲೆ ಅಪಘಾತ ತಡೆಯುವ ನಿಟ್ಟಿನಲ್ಲಿ ಜಾರಿಯಾಗಬೇಕಿದ್ದ ಕ್ರಮಗಳು ಮಾತ್ರ ಇನ್ನೂ ಜಾರಿಯಾಗುತ್ತಿಲ್ಲ.
Advertisement
Advertisement
ಇತ್ತೀಚಗೆ ಯಶವಂತಪುರ (Yeshwantpura) ಫ್ಲೈಓವರ್‌ನಲ್ಲಿ ಕಾರು, ಲಾರಿ ಸೇರಿದಂತೆ ದೊಡ್ಡ ವಾಹನಗಳೇ ಭೀಕರ ಅಪಘಾತಕ್ಕೆ ಒಳಗಾಗುತ್ತಿವೆ. ಒಂದು ಕಡೆ ಕೆಲವರ ನಿರ್ಲಕ್ಷ್ಯತನದ ಚಾಲನೆ ಅಪಘಾತಕ್ಕೆ ಕಾರಣವಾದರೆ, ಇನ್ನೂ ಕೆಲವರು ಸರಿಯಾಗಿ ರಸ್ತೆಯ ಮಾಹಿತಿ ಇಲ್ಲದೇ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಸದ್ಯ ಈ ಫ್ಲೈಓವರ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಇರುವುದಾಗಿ ಐಐಎಸ್‌ಸಿ ಕೂಡ ಹೇಳಿದೆ. ಆದರೆ ಟೆಕ್ನಿಕಲ್ ಸಮಸ್ಯೆ ಒಂದು ಕಡೆ ಆದರೆ ಮತ್ತೊಂದು ಕಡೆ ಫ್ಲೈಓವರ್‌ಗೆ ಅಳವಡಿಕೆ ಮಾಡಬೇಕಿದ್ದ ಸೂಚನಾ ಫಲಕಗಳು ಇಲ್ಲದಿರುವುದು. ಟಾಟಾ ಇನ್ಸ್ಟಿಟ್ಯೂಟ್ ಕಡೆಯಿಂದ ಬರುವ ವಾಹನಗಳು ನೇರವಾಗಿ ಫ್ಲೈಓವರ್ ಎಂಟ್ರಿಯಾಗಬೇಕಾದರೆ ರಾತ್ರಿ ವೇಳೆ ಸರಿಯಾದ ಮಾಹಿತಿ ಚಾಲಕರಿಗೆ ಸಿಗುತ್ತಿಲ್ಲ. ರಸ್ತೆ ತಿರುವು ಎಷ್ಟಿದೆ? ಎಲ್ಲಿ ತಿರುವಿದೆ? ವೇಗದ ಕಂಟ್ರೋಲ್ ಎಷ್ಟು? ಎನ್ನುವ ಬಗ್ಗೆ ಸರಿಯಾದ ಫಲಕಗಳ ಅಳವಡಿಕೆ ಮಾಡದ ಕಾರಣ ನಿತ್ಯ ಅಪಘಾತಗಳು ಹೆಚ್ಚಾಗುತ್ತಿವೆ.
Advertisement
Advertisement
ಶೀಘ್ರವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳೇನು?
ಫ್ಲೈಓವರ್ ಎಂಟ್ರಿಯಲ್ಲಿ ಬ್ಲಿಂಕ್ ಟ್ರಾಫಿಕ್ ಲೈಟ್‌ನ್ನು ಹಾಕಬೇಕು.
ಫ್ಲೈಓವರ್ ಇರುವ ಬಗ್ಗೆ, ವೇಗದ ಮಿತಿ ಸಂಬಂಧ ಫ್ಲೈಓವರ್ ಆರಂಭಕ್ಕೂ ಮುನ್ನ ಸೂಚನಾ ಫಲಕ ಹಾಕಬೇಕು.
ಫ್ಲೈಓವರ್ ಎಂಟ್ರಿಯ ತಡೆಗೊಡೆಗಳಲ್ಲಿ ಲೈಟ್‌ಗಳ ಅಳವಡಿಕೆಯಾಗಬೇಕು.
ಫ್ಲೈಓವರ್ ಮೇಲೆ ತಿರುವಿನ ಪ್ರಮಾಣ, ತಿರುವು ಇರುವ ಜಾಗದಲ್ಲಿ ರಿಫ್ಲೆಕ್ಟ್ ಲೈಟ್‌ಗಳ ಅಳವಡಿಕೆಯಾಗಬೇಕು.
ಫ್ಲೈಓವರ್ ಎಂಟ್ರಿಯಲ್ಲಿ ವೇಗ ನಿಯಂತ್ರಣ ಸೂಚನಾ ಫಲಕ ಹಾಕಬೇಕು.
ಸದ್ಯ ಈ ಯಾವ ಕ್ರಮಗಳು ಇಲ್ಲದೇ ಇರುವ ಕಾರಣ ರಸ್ತೆ ಅಥವಾ ಫ್ಲೈಓವರ್ ಪರಿಚಯ ಇಲ್ಲದವರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಟೆಕ್ನಿಕಲ್ ಸಮಸ್ಯೆ ಸರಿಮಾಡಲು ಸಮಯ ಬೇಕಾಗಲಿದೆ. ಆದರೆ ಕನಿಷ್ಟ ಸೂಚನಾ ಫಲಕಗಳನ್ನಾದರೂ ಹಾಕುವ ಕೆಲಸವಾದರೆ ಅಪಘಾತಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಕೂಡಲೇ ಕ್ರಮಕೈಗೊಳ್ಳಬೇಕಿದೆ.