– ಅಮಿತ್ ಶಾಗೆ ಚುನಾವಣಾ ಜವಾಬ್ದಾರಿ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ (West Bengal) ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Assembly Elections) ಗೆಲುವು ಸಾಧಿಸಲು ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೂಚಿಸಿದ್ದಾರೆ. ಸಂಸತ್‌ನಲ್ಲಿ (Parliament) ಬಂಗಾಳದ ಬಿಜೆಪಿ ರಾಜ್ಯಸಭಾ ಮತ್ತು ಲೋಕಸಭೆ ಸಂಸದರನ್ನು ಭೇಟಿಯಾದ ವೇಳೆ ಪ್ರಧಾನಿ ಮೋದಿ ಈ ಸೂಚನೆ ನೀಡಿದರು.
ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಬಂಗಾಳದಲ್ಲಿ ಈ ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕು. ನೀವೆಲ್ಲರೂ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೀರಿ. ಈ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಬೇಕು ಎಂದು ಸಂಸದರಿಗೆ ಪ್ರಧಾನಿ ಮೋದಿ ಕರೆ ನೀಡಿದರು. ಇದನ್ನೂ ಓದಿ: ಸಂಚಾರ್ ಸಾಥಿ ಆ್ಯಪ್ ವಿವಾದದ ನಡುವೆಯೇ ಹತ್ತುಪಟ್ಟು ಹೆಚ್ಚಾಯ್ತು ಡೌನ್‌ಲೋಡ್
ಎಸ್‌ಐಆರ್ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಮತದಾರರ ಪಟ್ಟಿ ‘ಶುದ್ಧೀಕರಣ’ ಅಗತ್ಯ ಹೆಜ್ಜೆಯಾಗಿದೆ ಎಂದರು. ಸರ್ಕಾರದ ಕಲ್ಯಾಣ ಕಾರ್ಯಗಳು ಜನರನ್ನು ಪರಿಣಾಮಕಾರಿಯಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂಪರ್ಕವನ್ನು ಕಾಯ್ದುಕೊಳ್ಳುವಂತೆ ಸಂಸದರಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಎಲ್ಲವೂ ತಿಳಿಯಾಗಿದೆ: ಪರಮೇಶ್ವರ್
ಕೇಂದ್ರ ಸರ್ಕಾರದ ಕೆಲಸವನ್ನು ಸಾರ್ವಜನಿಕರಿಗೆ ತಿಳಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಅಲ್ಲದೇ ಜಾಗೃತಿ ಮೂಡಿಸಲು ಮತ್ತು ಸಾಧನೆಗಳನ್ನು ಎತ್ತಿ ತೋರಿಸಲು ಸಂಸದರು ಸಾಮಾಜಿಕ ಮಾಧ್ಯಮ ಬಳಸಿಕೊಳ್ಳುವಂತೆ ಹೇಳಿದರು. ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಗೆ 82 ಲಕ್ಷ – ದರ್ಶನ್‌ಗೆ ಬಿಗ್ ಶಾಕ್
ಈ ನಡುವೆ ಬಿಹಾರ ಮಾದರಿಯಲ್ಲೇ ಮುಂಬರುವ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಚುನಾವಣಾ ಜವಾಬ್ದಾರಿಯನ್ನು ಗೃಹ ಸಚಿವ ಅಮಿತ್ ಶಾ (Amit Shah) ವಹಿಸಿಕೊಂಡಿದ್ದಾರೆ. ಈ ತಿಂಗಳಾಂತ್ಯಕ್ಕೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಅಮಿತ್ ಶಾ, ಚುನಾವಣಾ ಘೋಷಣೆಗೂ ಮೊದಲು ಪ್ರತಿ ರಾಜ್ಯಕ್ಕೆ ತಿಂಗಳಿಗೆ ಮೂರು ದಿನಗಳ ಸಮಯ ನೀಡಲಿದ್ದಾರೆ. ಕಾರ್ಯಕರ್ತರನ್ನು ಹುರಿದುಂಬಿಸುವುದು, ಸಂಘಟನೆಯನ್ನು ಸಕ್ರಿಯಗೊಳಿಸುವುದು, ಮಿತ್ರಪಕ್ಷಗಳೊಂದಿಗೆ ಜಂಟಿ ಪ್ರಚಾರ ಮತ್ತು ಕಾರ್ಯತಂತ್ರವನ್ನು ಜಾರಿಗೆ ತರಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರೆಡ್ ಕಾರ್ಪೆಟ್ ಮೇಲೆ ಚಹಾ ಮಾರಿದ ಮೋದಿ – ಕಾಂಗ್ರೆಸ್ ಎಐ ವೀಡಿಯೋಗೆ ಬಿಜೆಪಿ ಆಕ್ರೋಶ

