ಬಿಗ್ ಬಾಸ್ (Bigg Boss) ಮನೆಯಲ್ಲಿ ಏನೆಲ್ಲ ಆಗುತ್ತವೆ. ಆದರೆ, ಇದೇ ಮೊದಲ ಬಾರಿಗೆ ಜೋಡಿಯೊಂದು ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಮಲಗಿದ್ದಾರೆ. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದಾರೆ. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಗ್ ಬಾಸ್ ಕುರಿತಂತೆ ಹಲವು ರೀತಿಯ ಚರ್ಚೆಗೂ ಕಾರಣವಾಗಿದೆ.
ಅಷ್ಟಕ್ಕೂ ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿದ್ದು ಬೇರೆ ಯಾರೂ ಅಲ್ಲ. ವಿಕ್ಕಿ ಜೈನ್ (Vicky Jain) ಮತ್ತು ಅಂಕಿತಾ ಲೋಖಂಡೆ (Ankita Lokhande) ದಂಪತಿ. ಬಿಗ್ ಬಾಸ್ ಮನೆಗೆ ಇವರು ಸ್ಪರ್ಧಿಗಳು. ಆದರೆ, ಗಂಡ ಹೆಂಡತಿ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ನಾನಾ ರೀತಿಯ ಕಮೆಂಟ್ ಗಳು ಹರಿದಾಡುತ್ತಿವೆ. ಜೊತೆಗೆ ಅವರ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ.
Ye Vicky Bhaiya aur Ankita kya kar rahe hai family show me????pic.twitter.com/sSo1tz39dm
— #BiggBoss_Tak???? (@BiggBoss_Tak) December 25, 2023
ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು. ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದಾರೆ.
ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ. ಆದರೆ, ಇವತ್ತು ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿ ಮತ್ತೊಂದು ಶಾಕ್ ನೀಡಿದ್ದಾರೆ. ಅದಕ್ಕೆ ಹೇಳೋದು ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತ.