ಬೆಂಗಳೂರು: ಬಿಗ್ ಬಾಸ್ ಸೀಸನ್-6 ಮನೆಯಿಂದ ಹೊರಬಂದ ಸ್ಪರ್ಧಿ ಸ್ನೇಹ ಆಚಾರ್ಯ ಅವರು ಅದ್ಧೂರಿಯಾಗಿ ತಮ್ಮ ಮದುವೆಯನ್ನು ಮಾಡಿಕೊಂಡಿದ್ದಾರೆ.
ಸ್ನೇಹ ತಾವು ಪ್ರೀತಿಸಿದ ಗೆಳೆಯ ರಾಯನ್ ಅವರ ಜೊತೆ ನವೆಂಬರ್ 25ರಂದು ನಗರದ ಸಿರಿ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆಯಾದರು. ನವೆಂಬರ್ 24 ಶನಿವಾರ ಸಂಜೆ ಆರತಕ್ಷತೆ ನಡೆದಿದ್ದು, ಭಾನುವಾರ ಮುಂಜಾನೆ 5.25ಕ್ಕೆ ಸಪ್ತಪದಿ ತುಳಿದಿದ್ದಾರೆ.
View this post on Instagram
ರಾಯನ್ ಕೊಪ್ಕೊ ಮೂಲತಃ ನ್ಯೂಯಾರ್ಕ್‍ನವರಾಗಿದ್ದು, ತಮ್ಮ ಕಂಪನಿಯ ಅಭಿವೃದ್ಧಿಗಾಗಿ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈ ವೇಳೆ ಅವರಿಗೆ ಸ್ನೇಹ ಅವರ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಈಗ ದಂಪತಿಗಳಾಗಿದ್ದಾರೆ.
ಸ್ನೇಹ ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದು, ಮುಂಬೈನಲ್ಲಿ ನೃತ್ಯ ಸಂಯೋಜಕಿ ಆಗಿ ಗೋವಿಂದ, ಶಾಹಿದ್ ಕಪೂರ್, ಪ್ರಭುದೇವ, ಪ್ರಿಯಾಂಕಾ ಛೋಪ್ರಾಗೆ ಕೊರಿಯೋಗ್ರಾಫಿ ಮಾಡುವ ತಂಡದಲ್ಲಿದ್ದಾರೆ. ಸ್ನೇಹ ಅವರ ನೃತ್ಯ ನೋಡಿ ರಾಯನ್ ಇಷ್ಟಪಟ್ಟಿದ್ದಾರೆ.
ಪ್ರೀತಿ ಹುಟ್ಟಿದ್ದು ಹೇಗೆ..?
ರಾಯನ್ ಕೊಪ್ಕೊ ಬೆಂಗಳೂರಿಗೆ ಬಂದು ತಮ್ಮ ಕಂಪನಿಯ ಕೆಲಸವನ್ನು ಮುಗಿಸುತ್ತಿದ್ದರು. ಕೊನೆಯ ಎರಡು ತಿಂಗಳಲ್ಲಿ ನಾನು ಸಾಲ್ಸಾ ಡ್ಯಾನ್ಸ್ ಮಾಡಬೇಕಾದರೆ ಅವರು ನೋಡಿ ನನ್ನ ಬಳಿ ಬಂದು `ನಾನು ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ’ ಎಂದು ಕೇಳಿದ್ದರು. ನಾನು ಓಕೆ ಎಂದೆ. ನಂತರ ಅವರಿಗೆ ಡ್ಯಾನ್ಸ್ ಬರಲ್ಲ ಎಂದು ನನಗೆ ಗೊತ್ತಾಯಿತು. ಆಗ ಅವರ ಸೀನಿಯರ್ ಒಬ್ಬರನ್ನು ತೋರಿಸಿ, `ನೀವು ಅವರ ಬಳಿ ಡ್ಯಾನ್ಸ್ ಕಲಿತು ಬನ್ನಿ, ಆಮೇಲೆ ನನ್ನ ಜೊತೆ ಡ್ಯಾನ್ಸ್ ಮಾಡಬಹುದು’ ಎಂದು ಸ್ನೇಹ ಈ ಮೊದಲು ಹೇಳಿದರು.
ಸಿಕ್ಕಾಗ ಹಾಯ್, ಬಾಯ್ ಎಂದು ಮಾತನಾಡುತ್ತಿದ್ವಿ. ಅವರೇ ನನ್ನ ಬಳಿ ಬಂದು ಕಾಫಿ, ಟೀ, ತಿಂಡಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ನಾನು ಮಕ್ಕಳಿಗೆ ನಾಟಕ ಹೇಳಿಕೊಡುವಾಗ ಒಂದು ಪಾತ್ರ ಬೇಕಿತ್ತು. ಇಂಗ್ಲೀಷ್ ಕಲಿಸುವ ವ್ಯಕ್ತಿ ಬೇಕಿತ್ತು. ಆಗ ನನಗೆ ಇವರು ನೆನಪಾಗಿ ಅವರನ್ನು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಅಲ್ಲಿಂದ ಪರಸ್ಪರ ಇಬ್ಬರು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ಎಂದು ತಮ್ಮ ಮೊದಲ ಪರಿಚಯದ ಬಗ್ಗೆ ಸ್ನೇಹ ಬಿಗ್‍ಬಾಸ್ ಮನೆಗೆ ಹೋಗುವಾಗ ಹೇಳಿಕೊಂಡಿದರು.
View this post on Instagram
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv