ಕೊಪ್ಪಳ: ನ್ಯಾಯಾಂಗ ನಿಂದನೆಗೆ (Contempt of Court) ಕೊಪ್ಪಳ ಜಿಲ್ಲಾಧಿಕಾರಿ (Koppala DC) ನಳೀನ್ ಅತುಲ್ ಗುರಿಯಾಗಿದ್ದಾರೆ.
ಪ್ರಕರಣ ಒಂದರ ವಿಚಾರಣೆ ನಡೆಸಿದ್ದ ಗಂಗಾವತಿಯ ಕೋರ್ಟ್ (Gangavathi Court) ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡಲು ಆದೇಶಿಸಿತ್ತು. ಕಾರು ಜಪ್ತಿ ಮಾಡಲು ಕೋರ್ಟ್ ಅಧಿಕಾರಿಗಳು ಹೋದಾಗ ಡಿಸಿ ಕೀ ಕೊಡದೇ ಸತಾಯಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ
ಏನಿದು ಪ್ರಕರಣ?
ಗಂಗಾವತಿ ನಗರಸಭೆ ವಾಲ್ಮೀಕಿ ವೃತ್ತದಿಂದ ಜಯನಗರ ಬಡಾವಣೆವರೆಗೆ ರಸ್ತೆ ಅಗಲೀಕರಣ ಮಾಡಲಾಗಿದೆ. ಈ ವೇಳೆ ಗಂಗಾವತಿಯ ಕಲ್ಮಠ ಹಾಗೂ ವೀರುಪಾಕ್ಷಪ್ಪ ಅವರ ಭೂಮಿ ಒತ್ತುವರಿ ಮಾಡಿ ರಸ್ತೆ ಅಗಲೀಕರಣ ಮಾಡಲಾಗಿದೆ. ಮಾಲೀಕರಿಗೆ ಮಾಹಿತಿ ನೀಡದೇ ರಸ್ತೆ ಅಗಲೀಕರಣ ಮಾಡಿದ್ದು, ಮತ್ತು ಪರಿಹಾರ ಕೊಡದ ಹಿನ್ನೆಲೆ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ತಾಯಿ, ಮಗನ ಕೊಲೆ ಕೇಸ್ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು
ಸುದೀರ್ಘ 6 ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಕೋರ್ಟ್ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡಲು ಆದೇಶ ಮಾಡಿತ್ತು. ವಿಚಾರಣೆ ಮಾಡಿದ ಬಳಿಕ ಕಲ್ಮಠಕ್ಕೆ ಸುಮಾರು 7 ಲಕ್ಷ ರೂ., ವಿರೂಪಾಕ್ಷಪ್ಪ ಅವರಿಗೆ 6 ಲಕ್ಷ ರೂ. ಪರಿಹಾರ ನೀಡಲು ಆದೇಶ ಮಾಡಿತ್ತು. ಇದುವರೆಗೂ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಮಾಲೀಕರು ಮತ್ತೊಮ್ಮೆ ಕೋರ್ಟ್ ಮೊರೆ ಹೋದಾಗ ಗಂಗಾವತಿಯ ಹಿರಿಯ ಶ್ರೇಣಿಯ ನ್ಯಾಯಾಲಯ ಕಾರು ಜಪ್ತಿ ಮಾಡಲು ಆದೇಶ ನೀಡಿತ್ತು.