ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ದಲಿತ ಸಮಾವೇಶ ನಡೆಸಲು ದಲಿತ ಸಚಿವರು ಚಿಂತನೆ ನಡೆಸಿದ್ದು, ಇದಕ್ಕೆ ಪಕ್ಷದೊಳಗೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆ ಇದನ್ನು ಶೋಷಿತರ ಸಮಾವೇಶ ಎಂದು ಹೆಸರು ಪರಿಷ್ಕರಿಸಿ ಸಮಾವೇಶ ನಡೆಸಲು ಚಿಂತಿಸಿರುವುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಸುಳಿವು ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ ಅಥವಾ ಮೇನಲ್ಲಿ ಹುಬ್ಬಳಿ, ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.ಇದನ್ನೂ ಓದಿ:ನಾನು ಹೈದರಾಬಾದ್‌ನವಳು : ರಶ್ಮಿಕಾ ಮಾತಿಗೆ ಕನ್ನಡಿಗರು ಕೆಂಡ
Advertisement
ಸಮಾವೇಶ ನಡೆಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಜೊತೆಗೆ ಮಾತನಾಡಿದ್ದು, ಅವರ ಜೊತೆಗೆ ಮಾತನಾಡಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಮಾತನಾಡುವ ಪ್ರಮೇಯ ಬರಲ್ಲ. ನಾವು ಒಂದು ಸಮುದಾಯದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಸರ್ಕಾರ ಇರುವ ಹಿನ್ನೆಲೆ ಆಡಳಿತ ವಿರೋಧಿ ಅಲೆ ಸಹಜ. ಹೀಗಾಗಿ ಕಾಂಗ್ರೆಸ್‌ಗೆ ಯಾವ ಸಮಾವೇಶ ಮಾಡಿದರೆ ಶಕ್ತಿ ಬರುತ್ತೆ ಆ ಸಮಾವೇಶ ಮಾಡುವುದು ಸಾಮಾನ್ಯ ಪ್ರಕ್ರಿಯೆ. 2028ಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ. ನಾವು ಗ್ಯಾರಂಟಿ ನೀಡಿದ್ದೇವೆ, ಅದರ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದರು.
Advertisement
Advertisement
ಪಕ್ಷದ ಆಶಯದಲ್ಲಿ ಸಮಾವೇಶ ಮಾಡಬೇಕು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಅವರೇ ಬಂದು ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಹೇಳಿ, ಸಮಾವೇಶಕ್ಕೆ ಹೈಕಮಾಂಡ್ ಅನುಮತಿ ನೀಡುವ ನಿರೀಕ್ಷೆ ವ್ಯಕ್ತಪಡಿಸಿದರು.
Advertisement
ದೆಹಲಿ ಪ್ರವಾಸದ ಅವಧಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ, ಸರ್ಕಾರ ಮತ್ತು ಪಕ್ಷದ ಬೆಳವಣಿಗೆ ಗಮನಕ್ಕೆ ತಂದಿದೆ. ಯಾವ ವಿಚಾರ ಚರ್ಚೆ ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆ.ಸಿ ವೇಣುಗೋಪಾಲ್, ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದೇನೆ. ಅವರ ಜೊತೆಗೂ ರಾಜ್ಯದ ವಿಷಯಗಳ ಚರ್ಚೆ ಮಾಡಿದೆ. ಸುರ್ಜೇವಾಲ ಹೆಚ್ಚು ಹೊತ್ತು ಸಿಗಲಿಲ್ಲ. ಅವರಿಗೆ ನಾನು ಹೇಳಬೇಕಿದ್ದ ವಿಷಯ ಲಿಖಿತವಾಗಿ ತಿಳಿಸಿದೆ.
ಪಕ್ಷ ಸಂಘಟನೆ ಮಾಡಿ 2028ಕ್ಕೆ ಸರ್ಕಾರ ತರಬೇಕು, ಆ ದಿಶೆಯಲ್ಲಿ ಏನು ತೀರ್ಮಾನ ಮಾಡಬೇಕಿದೆ ಅದರ ಬಗ್ಗೆ ಮನವರಿಕೆ ಮಾಡಿದೆ. ನಾನು ಗಮನಕ್ಕೆ ತಂದ ಅಂಶಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಪಕ್ಷ ಸಂಘಟನೆಗೆ ಎರಡು ಅಂಶಗಳು ಹೇಳಿದ್ದೇನೆ. ವಿಧಾನ ಪರಿಷತ್ ನೇಮಕ ಇದೆ. ಪರಿಷತ್ ನಿರಾಶ್ರಿತರ ಕೂಟ ಆಗಬಾರದು, ವಿದ್ವತ್ ಇರುವ ಜನರಿಗೆ ಅವಕಾಶ ಮಾಡಿಕೊಡಬೇಕು. ಈ ಪರಂಪರೆಗೆ ತಿಲಾಂಜಲಿ ಇಡುವ ಕೆಲಸ ಆಗಿದೆ ಚುನಾವಣೆಯಲ್ಲಿ ಗೆಲ್ಲುಲು ಸಾಧ್ಯವಾಗದ ಕೆಳಸಮುದಾಯದ ನಾಯಕರಿಗೆ ಅವಕಾಶ ನೀಡಬೇಕು. ಇದರಿಂದ ಪಕ್ಷಕ್ಕೆ ಕೆಳ ಸಮುದಾಯದ ಬೆಂಬಲ ಸಿಗುತ್ತದೆ ಎಂದರು.
224 ವಿಧಾನಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬೇರೆ ಸಮುದಾಯಗಳಿಗೆ ಅವಕಾಶ ನೀಡಬೇಕು. ಎಲ್ಲ ಸ್ಥಾನಗಳನ್ನು ಒಂದೇ ಸಮುದಾಯಕ್ಕೆ ನೀಡಬಾರದು, ಮುಂಚೂಣಿ ಘಟಕಗಳಲ್ಲೂ ವಿವಿಧ ಸಮುದಾಯಗಳಿಗೆ ಅವಕಾಶ ನೀಡಬೇಕು. ಇದರಿಂದ ಸಂಘಟನೆಗೆ ಶಕ್ತಿ ಸಿಗಲಿದೆ, ಇದನ್ನು ನಾನು ನನ್ನ ಕ್ಷೇತ್ರದಲ್ಲಿ ಪ್ರಯೋಗ ಮಾಡಿದ್ದೇನೆ. ಸಾಮಾನ್ಯ ಕ್ಷೇತ್ರದಲ್ಲಿ ಎಸ್ಟಿಯಾಗಿದ್ದರು ಗೆದ್ದು ಬರ್ತಿದ್ದೇನೆ. ಇದೇ ಸಲಹೆಯನ್ನು ಹೈಕಮಾಂಡ್‌ಗೆ ನೀಡಿದ್ದೇನೆ ಎಂದರು.ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್ ವಿಲೀನ | ಇನ್ಮುಂದೆ ಐಪಿಎಲ್ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್ ಮಾಡಿದವರ ಕಥೆ ಏನು?
ಡಿಕೆಶಿ ಬದಲಾವಣೆಗೆ ನಾವು ಒತ್ತಾಯಿಸಿಲ್ಲ:
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ಗಮನದಲ್ಲಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವಾಗ ಹಾಲಿ ಅಧ್ಯಕ್ಷರು ಲೋಕಸಭೆ ಚುನಾವಣೆವರೆಗೂ ಇರ್ತಾರೆ ಎಂದು ನಮ್ಮ ಹೈಕಮಾಂಡ್ ನಾಯಕರು ಹೇಳಿದ್ದರು. ಈಗ ಲೋಕಸಭೆ ಚುನಾವಣೆ ಅಂತ್ಯವಾಗಿರುವ ಹಿನ್ನೆಲೆ ಕಾರ್ಯಕರ್ತರಲ್ಲಿ ಪ್ರಶ್ನೆ ಇದೆ. ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ನಾವು ಒತ್ತಾಯ ಮಾಡಿಲ್ಲ. ಆದರೆ ಕಾರ್ಯಕರ್ತರ ಗೊಂದಲ ಬಗೆಹರಿಸಬೇಕು. ಡಿ.ಕೆ ಶಿವಕುಮಾರ್ ಅವರು ಮುಂದುವರಿಯುವುದರಲ್ಲಿ ಅಭ್ಯಂತರ ಇಲ್ಲ. ಎಐಸಿಸಿ ನಾಯಕರು ಕೆಪಿಸಿಸಿ ಅಧ್ಯಕ್ಷ ಆಗು ಎಂದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧ್ಯಕ್ಷ ಆಗುತ್ತೇನೆ. ಪಕ್ಷದ ನಿಯಮಗಳ ಪ್ರಕಾರ ಒಬ್ಬರು ಎರಡು ಹುದ್ದೆ ನಿಭಾಯಿಸಬಾರದು ಎಂದರು.
ಸಿಎಂ, ಸಿದ್ದರಾಮಯ್ಯ ಪೂರ್ಣಾವಧಿ ಬಗ್ಗೆ ಸಚಿವರ ಹೇಳಿಕೆ ವಿಚಾರಕ್ಕೆ ಮಾತನಾಡಿ, ಯಾರು ಎಷ್ಟು ವರ್ಷ ಇರ್ತಾರೆ, ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು, ದೇವರಾಜು ಅರಸು ಸಿಎಂ ಆದಾಗ ವಿಧಾನಸಭೆ ಸದಸ್ಯರು ಅಲ್ಲ, ಸಾಕಷ್ಟು ಜನರು ಸಿಎಂ ಹುದ್ದೆಯ ಸ್ಪರ್ಧೆಯಲ್ಲಿದ್ದರು, ಅದಾಗ್ಯೂ ಅರಸು ಅವರನ್ನು ಸಿಎಂ ಮಾಡಲಾಯಿತು. ಶಾಸಕರ ಅಭಿಪ್ರಾಯ ಕಡೆಗಣಿಸಿ ಹೈಕಮಾಂಡ್ ತೀರ್ಮಾನ ಮಾಡಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಉಸ್ತುವಾರಿ ಜವಬ್ದಾರಿಯಿಂದ ಬಿಡುಗಡೆ:
ಹಾಸನ ಉಸ್ತುವಾರಿಯಿಂದ ನನ್ನ ಬಿಡುಗಡೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ನನ್ನ ಜಿಲ್ಲೆ ತುಮಕೂರಿನಲ್ಲಿ ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ಬಿಡುಗಡೆ ಕೋರಿದ್ದೇನೆ. ಅವಕಾಶ ನೀಡಿದ್ದಕ್ಕೆ ನನ್ನ ಕೃತ್ಯಜ್ಞತೆ ಇದೆ. ಬೆಳಗಾವಿ ಬಳಿಕ ತುಮಕೂರು ದೊಡ್ಡ ಜಿಲ್ಲೆ ಹೀಗಾಗಿ ಜಿಲ್ಲೆಯಲ್ಲಿ ಸಂಘಟನೆ ಮಾಡಬೇಕಿದೆ. ಇದರ ಬದಲಿಗೆ ನಾನು ತುಮಕೂರು ಅಲ್ಲ, ಯಾವ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ಕೇಳಿಲ್ಲ, ಹಾಸನದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಿತ್ತು ಅದನ್ನು ಮಾಡಿದೆ. ಹೀಗಾಗಿ ಬಿಡುಗಡೆ ಕೋರಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದರು.