ಬೀಜಿಂಗ್: ಕಂಟೈನರ್ ಹಡಗೊಂದು (Container Ship) ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಇಬ್ಬರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಈ ಘಟನೆಯು ಚೀನಾದ (China) ಹಾಂಗ್ ಕಾಂಗ್‌ನ ವಾಯುವ್ಯಕ್ಕೆ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಗುವಾಂಗ್‌ಝೌದಲ್ಲಿ ಸಂಭವಿಸಿದೆ. ಮುಂಜಾನೆ ಗುವಾಂಗ್‌ಝೌವಿನ ನನ್ಶಾ ಜಿಲ್ಲೆಯ ಲಿಕ್ಸಿನ್ಶಾ ಸೇತುವೆಗೆ ಖಾಲಿ ಕಂಟೈನರ್ ಹಡಗು ಡಿಕ್ಕಿ ಹೊಡೆದು ಸೇತುವೆಯ ಒಂದು ಭಾಗ ಕುಸಿದಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಘಟನೆಯ ವೇಳೆ ಇದೇ ಸೇತುವೆ ಮೇಲೆ ಬಸ್ಸೊಂದು ಚಲಿಸುತ್ತಿದ್ದು, ನದಿಗೆ ಉರುಳಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿ, ಮೂವರು ನಾಪತ್ತೆಯಾಗಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಅವಘಡದಿಂದಾಗಿ ಐದು ವಾಹನಗಳಿಗೂ ಹಾನಿಯಾಗಿದೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್ ಕದನ!
Advertisement
Advertisement
ಬೀಜಿಂಗ್ ಮಾಧ್ಯಮಗಳ ಪ್ರಕಾರ, ಅವಘಡಕ್ಕೆ ಸಂಬಂಧಿಸಿದಂತೆ ಹಡಗಿನ ಕ್ಯಾಪ್ಟನ್ ನನ್ನು ಬಂಧಿಸಲಾಗಿದೆ. ಅಪಘಾತದ ಕಾರಣ ಮತ್ತು ಸಾವು- ನೋವುಗಳ ಸಂಖ್ಯೆ ಪ್ರಸ್ತುತ ತನಿಖೆಯಲ್ಲಿದೆ. ಕಂಟೈನರ್ ಸೇತುವೆಗೆ ಡಿಕ್ಕಿಯಾದ ಸಮಯದಲ್ಲಿ ಬಸ್ ಸೇತುವೆಯ ಮೇಲೆ ಹಾದು ಹೋಗುತ್ತಿದ್ದು, ನದಿಗೆ ಬಿದ್ದಿದೆ. ಹಡಗಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಸಂಚಾರ ಸ್ಥಗಿತ: ರಕ್ಷಣಾ ತಂಡಗಳು ಘಟನಾ ಸ್ಥಳದಲ್ಲಿವೆ. ಆದರೆ ಇತರ ಸಾವು-ನೋವುಗಳ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಘಟನೆಯ ನಂತರ ಸೇತುವೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಿವಾಸಿಗಳಿಗೆ ಪ್ರಯಾಣಿಸಲು ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.