ಬೆಂಗಳೂರು: ಗಿರಿಯಾಸ್ ಶೋರೂಂಗೆ ಕಂಟೈನರ್ ನುಗ್ಗಿರುವ ಘಟನೆ ಮಾರತಹಳ್ಳಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.
ಕಂಟೈನರ್ ಶೋರೂಂಗೆ ನುಗ್ಗಿರುವ ದೃಶ್ಯ ಶೋರೂಂನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ರಿಂಗ್ ರಸ್ತೆ ಮೂಲಕ ಮಾರತ್ತಹಳ್ಳಿ ಕಡೆ ಬರುವಾಗ ಬೈಕ್ ಸವಾರ ಏಕಾಏಕಿ ಬ್ರೇಕ್ ಹೊಡೆದಿದ್ದು, ಹಿಂದೆ ರಭಸವಾಗಿ ಬರುತ್ತಿದ್ದ ಕಂಟೈನರ್ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಗಿರಿಯಾಸ್ ಶೋರೂಂಗೆ ಗುದ್ದಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಈ ಸಂಬಂಧ ಮಾರತ್ತಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಕಂಟೈನರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಚಾಲಕ ಮದ್ಯ ಸೇವಿಸಿ ಚಾಲನೆ ಮಾಡಿರುವುದೇ ಘಟನೆಗೆ ಕಾರಣವಾಗಿದೆಯೇ ಅಥವಾ ಅತಿವೇಗ, ಅಜಾಗರುಕತೆಯಿಂದ ಘಟನೆ ನಡೆದಿದೆಯೇ ಏನ್ನುವುದರೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.