ಟೊಮೆಟೋ, ಈರುಳ್ಳಿ ಬಳಿಕ ಇದೀಗ ಬೆಳ್ಳುಳ್ಳಿ (Garlic) ಬೆಲೆ ಗಗನಕ್ಕೇರಿದೆ. ಆದರೂ ಗ್ರಾಹಕರಿಗೆ ಬೆಳ್ಳುಳ್ಳಿ ಕೊಂಡುಕೊಳ್ಳದೇ ಬೇರೆ ವಿಧಿಯಿಲ್ಲ. ಯಾಕೆಂದರೆ ನಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರೆ ಆರೋಗ್ಯದ ಮೇಲೂ ಹಾನಿಯಾಗುತ್ತದೆ.
ಹೌದು. ಆರೋಗ್ಯಕ್ಕೆ ಒಳ್ಳೆಯದು ಎಂದು ಅತೀ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಸೇವಿಸಬಾರದು. ಹೀಗಾಗಿ ಬೆಳ್ಳುಳ್ಳಿ ಎಷ್ಟು ಆರೋಗ್ಯಕವೂ ಅಷ್ಟೇ ಅಪಾಯಕಾರಿಯೂ ಆಗಿರುತ್ತದೆ. ಹಾಕಿದ್ರೆ ಅಗತ್ಯಕ್ಕಿಂತ ಹೆಚ್ಚು ಬೇಳ್ಳುಳ್ಳಿ ಸೇವಿಸಿದರೆ ನಮ್ಮ ದೇಹದ ಮೇಲೆ ಯಾವ ರೀತಿಯ ಅಡ್ಡ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ನೋಡೋಣ..
ಯಕೃತ್ತಿಗೆ (Liver) ಹಾನಿ: ಬೆಳ್ಳುಳ್ಳಿಯ ಅತಿಯಾದ ಸೇವನೆಯು ನಿಮ್ಮ ಲಿವರ್‌ಗೆ ಹಾನಿಯುಂಟು ಮಾಡುತ್ತದೆ. ಯಾಕೆಂದರೆ ಹಸಿ ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ (antioxidant) ಇದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಯಕೃತ್ತಿನಲ್ಲಿ ವಿಷತ್ವ ಉಂಟಾಗುತ್ತದೆ.
ಎದೆಯುರಿ ಸಮಸ್ಯೆ: ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಅನೇಕ ಜನರಿಗೆ ವಾಕರಿಕೆ, ವಾಂತಿ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ವಾಸ್ತವವಾಗಿ, ಬೆಳ್ಳುಳ್ಳಿ ಆಮ್ಲೀಯತೆಯನ್ನು ಉಂಟುಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ.
ಭೇದಿ: ಹಲವರು ಆರೋಗ್ಯಕ್ಕೆ ಒಳ್ಳೆಯದು ಎಂದು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುತ್ತಾರೆ. ಇದರಿಂದ ಬೇಧಿ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಕಾರಣವೆಂದರೆ ಬೆಳ್ಳುಳ್ಳಿಯಲ್ಲಿ ಸಲ್ಫರ್ ರೂಪಿಸುವ ಸಂಯುಕ್ತಗಳು ಕಂಡುಬರುತ್ತವೆ. ಇದರಿಂದಾಗಿ ಸಡಿಲ ಚಲನೆಯ ಸಮಸ್ಯೆ ಉಂಟಾಗಬಹುದು. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವಾಗ ಸ್ವಲ್ಪ ಎಚ್ಚರದಿಂದಿರಿ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು: ಬೆಳ್ಳುಳ್ಳಿಯನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗಬಹುದು. ಉದಾಹರಣೆಗೆ ವಾಯು, ಆಮ್ಲೀಯತೆ. ಜೊತೆಗೆ ನೀವು ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸದಿರುವುದು ಒಳ್ಳೆಯದು.
ರಕ್ತವನ್ನು ತೆಳುಗೊಳಿಸುತ್ತದೆ: ಬೆಳ್ಳುಳ್ಳಿ ರಕ್ತವನ್ನು ತೆಳುಗೊಳಿಸಲು ಪರಿಣಾಮಕಾರಿಯಾಗಿದೆ. ನೀವು ಬೆಳ್ಳುಳ್ಳಿಯನ್ನು ಹೆಚ್ಚು ಸೇವಿಸಿದರೆ ರಕ್ತಸ್ರಾವದ ಅಪಾಯವು ಹೆಚ್ಚಾಗುತ್ತದೆ.
ಅಲರ್ಜಿ: ಹೆಚ್ಚು ಬೆಳ್ಳುಳ್ಳಿಯನ್ನು ಬಳಸುವುದರಿಂದ ಅಲರ್ಜಿಯ ಸಮಸ್ಯೆಗಳು ಕೂಡ ಉಂಟಾಗಬಹುದು. ಅಲರ್ಜಿಯು ಚರ್ಮದ ದದ್ದುಗಳನ್ನು ಒಳಗೊಂಡಿರುತ್ತದೆ. ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ.
ಒಟ್ಟಿನಲ್ಲಿ ಬೆಳ್ಳುಳ್ಳಿಯನ್ನು ಲಿಮಿಟ್‌ಗಿಂದ ಹೆಚ್ಚಾಗಿ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಪ್ರತಿದಿನ 2-3 ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.