ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಕಾಮಗಾರಿಗಳು ನಡೆಯುತ್ತಿದೆ. ರೋಡ್‍ನಲ್ಲಿರುವ ಮೋರಿ ಸೇರಿದಂತೆ ಎಲ್ಲ ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕಾಮಗಾರಿಯ ಹಣವೆಷ್ಟು ಅನ್ನೋ ಸೂಚನೆಯ ಫಲಕವಿಲ್ಲ.
Advertisement
ಮಾಡಿದ ಕಾಮಗಾರಿಗಳನ್ನೇ ಮತ್ತೆ-ಮತ್ತೆ ಮಾಡ್ತಿದ್ದಾರೆ ಎಂದು ಮಲ್ಲೇಶ್ವರಂ ನಿವಾಸಿಗಳು ಇಂದು ಸ್ಯಾಂಕಿ ಕೆರೆ ಬಳಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಸ್ಯಾಂಕಿ ಕೆರೆಯ ಪಾದಚಾರಿ ಮಾರ್ಗದಲ್ಲಿ ಮೂರು ತಿಂಗಳ ಹಿಂದೆಯಷ್ಟೇ ಸ್ವಾಬ್‍ಗಳನ್ನು ಆಳವಡಿಕೆ ಮಾಡಿದ್ರು. ಇದನ್ನ ಮತ್ತೆ ತೆಗೆದು ಹೊಸದಾಗಿ ಕಾಮಗಾರಿ ಮಾಡ್ತಿದ್ದಾರೆ. ಯಾವ ಕಾರಣಕ್ಕೆ ಹೀಗೆ ಮಾಡ್ತಿದ್ದಾರೆ? ಯಾವ ಮಾಹಿತಿಯೂ ಸಾರ್ವಜನಿಕರಿಗೆ ಸಿಗ್ತಿಲ್ಲ. ಜನರ ತೆರಿಗೆ ಹಣವನ್ನು ಪೋಲು ಮಾಡ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ
Advertisement
Advertisement
ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ಮಾಡಲು ಮುಂದಾಗಿದ್ದ ನಿವಾಸಿಗಳನ್ನು ಪೊಲೀಸರು ಅರ್ಧಕ್ಕೆ ತಡೆದಿದ್ದು, ನೀವು ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿನ ವಿರುದ್ಧವಾಗಿ ಪ್ರತಿಭಟನೆಗೆ ಅವಕಾಶವಿಲ್ಲವೆಂದು ಪ್ರತಿಭಟನೆ ಮಾಡಲು ಬಂದಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.