ಬೆಂಗಳೂರು: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಅವಶೇಷಗಳಡಿ ಮೂವರು ಸಿಲುಕಿ ಹಾಕಿಕೊಂಡಿರುವ ಘಟನೆ ರಾಜಧಾನಿಯ ತ್ಯಾಗರಾಜನಗರದಲ್ಲಿ ನಡೆದಿದೆ.
ತ್ಯಾಗರಾಜನಗರದಲ್ಲಿ ಇಂದು ಮಧ್ಯಾಹ್ನ 4.30ರ ವೇಳೆಗೆ ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಕಟ್ಟಡದ ಅವಶೇಷಗಳಡಿ ಮೂವರು ಸಿಲುಕಿರುವ ಕುರಿತು ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿದ್ದಾರೆ.
Advertisement
Advertisement
ನಿರ್ಮಾಣ ಹಂತದ ಕಟ್ಟಡದಲ್ಲಿ ಸುಹೇಲ್ ಹಾಗೂ ಶಬ್ಬೀರ್ ಎಂಬ ವೆಲ್ಡೀಂಗ್ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಟ್ಟಡದ ಒಳಗೆ ಸುಹೇಲ್ ಕೆಲಸ ಮಾಡುತ್ತಿದ್ದರೇ, ಕಟ್ಟಡದ ಹೊರಗೆ ಶಬ್ಬೀರ್ ಕೆಲಸ ಮಾಡುತ್ತಿದ್ದರು. ಕಟ್ಟಡ ಏಕಾಏಕಿ ನೆಲಕ್ಕಪ್ಪಳಿಸುತ್ತಿದ್ದಂತೆ ಶಬ್ಬೀರ್ ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಆದರೆ ಕಟ್ಟಡದಲ್ಲಿದ್ದ ಸುಹೇಲ್ ಏನಾಗಿದ್ದರೆಂಬ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Advertisement
ನಿರ್ಮಾಣ ಹಂತದ ಕಟ್ಟಡ ಬಿಲ್ಡ್ ಬೆಂಗಳೂರು ಇನ್ಫ್ರ ಪ್ರಾಜೆಕ್ಟ್ ಎಂಬವರಿಗೆ ಸೇರಿದ್ದಾಗಿದೆ. ಕಟ್ಟಡದ ಪಕ್ಕದಲ್ಲೇ ಖಾಲಿ ಸೈಟಿನಲ್ಲಿ ನಡೆಯುತ್ತಿದ್ದ ಕಾಮಗಾರಿಯಿಂದ ಕಟ್ಟಡ ಕುಸಿದು ಬಿದ್ದಿದೆ. ಪಕ್ಕದ ಖಾಲಿ ಸೈಟಿನವರು ಕಟ್ಟಡ ನಿರ್ಮಾಣಕ್ಕಾಗಿ ತುಂಬಾ ಆಳವಾಗಿ ಪಾಯ ತೆಗೆದಿದ್ದರು. ಆಳವಾಗಿ ಪಾಯ ತೆಗೆದಿದ್ದರಿಂದ ಪಕ್ಕದಲ್ಲಿನ ಕಟ್ಟಡ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews