ಒಂದು ರಾಷ್ಟ್ರ, ಒಂದು ಚುನಾವಣೆ (One Nation, One Election) ಸಾಧ್ಯತೆ ಕುರಿತು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ (Ram nath Kovind) ಅವರ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಕೇಂದ್ರ ನಡೆಸುತ್ತಿರುವ ಈ ಅಭಿಯಾನಕ್ಕೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಪರಿಸ್ಥಿತಿ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದಲ್ಲಿ ಆಗಬೇಕಾದ ತಿದ್ದುಪಡಿ ಹೀಗೆ ಅನೇಕ ವಿಚಾರಗಳ ಸುತ್ತ ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಗಿರಕಿ ಹೊಡೆಯುತ್ತಿದೆ. ಅದೇನು ಎಂಬುದರ ಬಗ್ಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.
ಏನಿದು ಒಂದು ರಾಷ್ಟ್ರ, ಒಂದು ಚುನಾವಣೆ?
ದೇಶಾದ್ಯಂತ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದೇ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದರ ಪರಿಕಲ್ಪನೆ. ಅಂದರೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆ ನಡೆಸುವುದು. ದೇಶದಲ್ಲಿ ಇದುವರೆಗೆ ಸಾಮಾನ್ಯವಾಗಿ ಸಂಸದ ಹಾಗೂ ಶಾಸಕರ ಸ್ಥಾನಗಳಿಗಾಗಿ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತವೆ. ಆದರೆ ಈ ಪರಿಕಲ್ಪನೆಯಡಿ ಎರಡೂ ಸ್ಥಾನಗಳಿಗೆ ಏಕಕಾಲದಲ್ಲೇ ಚುನಾವಣೆ ನಡೆಸುವುದಾಗಿದೆ. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು?
Advertisement
Advertisement
ಇದು ಹೊಸ ಪರಿಕಲ್ಪನೆಯೇ?
ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಹೊಸದೇನಲ್ಲ. ಭಾರತ ಸ್ವತಂತ್ರಗೊಂಡ ಆರಂಭದಿಂದಲೂ ಈ ಪರಿಕಲ್ಪನೆಯಲ್ಲೇ ಚುನಾವಣೆಗಳು ನಡೆಯುತ್ತಿದ್ದವು. 1952ರ ಮೊದಲ ಚುನಾವಣೆಯಿಂದ ಹಿಡಿದು 1967ರ ನಾಲ್ಕನೇ ಸಾರ್ವತ್ರಿಕ ಚುನಾವಣೆವರೆಗೆ ಲೋಕಸಭೆ ಹಾಗೂ ಎಲ್ಲಾ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲಾಗಿತ್ತು. 1968 ಮತ್ತು 1969 ರಲ್ಲಿ ಹಲವು ವಿಧಾನಸಭೆಗಳ ಅವಧಿ ಪೂರ್ವ ವಿಸರ್ಜನೆಯಾಯಿತು. ಅಲ್ಲದೇ 1970 ರಲ್ಲಿ ಲೋಕಸಭೆ ಅವಧಿಪೂರ್ವ ವಿಸರ್ಜನೆಯಾದ ಕಾರಣ ಏಕಕಾಲದ ಚುನಾವಣೆ ಪ್ರಕ್ರಿಯೆ ಏರುಪೇರಾಯಿತು.
Advertisement
ಪರ ವಾದ ಏನು?
ಇಡೀ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದರೆ ಭಾರೀ ಪ್ರಮಾಣದ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂಬುದು ಈ ವ್ಯವಸ್ಥೆ ಪರವಾಗಿ ಇರುವವರ ವಾದ. ಈಗಿರುವ ಲೆಕ್ಕಾಚಾರದ ಪ್ರಕಾರ, ದೇಶದಲ್ಲಿ ಚುನಾವಣೆ ಪ್ರಕ್ರಿಯೆಗಾಗಿ 50 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಬಂದಲ್ಲಿ ದೇಶದ ಬೊಕ್ಕಸಕ್ಕೆ ಆಗುವ ಬಹುದೊಡ್ಡ ಹೊರೆಯನ್ನು ತಪ್ಪಿಸಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಚುನಾವಣೆಗಳ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದ ನೀತಿ ಸಂಹಿತೆ ಕಿರಿಕಿರಿಗೂ ಇದರಿಂದ ಮುಕ್ತಿ ಸಿಗಬಹುದು ಎಂಬ ವಾದವೂ ಇದೆ. ಅಲ್ಲದೇ ಏಕಕಾಲದ ಚುನಾವಣೆಗಳು ಮತದಾನದ ಪ್ರಮಾಣವನ್ನೂ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಭೂಮಿ ನಿರ್ನಾಮ ಹಂತ ತಲುಪಿದ್ರೆ ಮುಂದೇನು?
Advertisement
ವಿರೋಧ ಯಾಕೆ?
ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಗೆ ಕಾಂಗ್ರೆಸ್ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಏಕಕಾಲದ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಇದೆ. ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ವ್ಯವಸ್ಥೆಯ ಮಧ್ಯದಲ್ಲಿಯೇ ಬಹುಮತ ಕಳೆದುಕೊಂಡು ಸರ್ಕಾರವೊಂದು ಅಧಿಕಾರದಿಂದ ಕೆಳಗಿಳಿಯಬಹುದು ಮತ್ತು ಹೊಸ ಸರ್ಕಾರ ರಚನೆಯಾಗಬಹುದು. ಆದರೆ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎನ್ನುವುದು ಮತ್ತೊಂದು ವಾದವಾಗಿದೆ.
ಈ ಪರಿಕಲ್ಪನೆಯಲ್ಲಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ರಾಷ್ಟ್ರಪತಿ ಆಳ್ವಿಕೆಗೆ ಬದಲಾಗುತ್ತಿದ್ದೇವೆ ಎಂದರ್ಥ. ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಷ್ಟ್ರಪತಿ ಆಡಳಿತ ವ್ಯವಸ್ಥೆಗೆ ಬದಲಾಯಿಸಲು ಸಂವಿಧಾನದ ಹಲವಾರು ತಿದ್ದುಪಡಿಗಳ ಅಗತ್ಯವಿದೆ ಎನ್ನಲಾಗಿದೆ.
ಸಂವಿಧಾನಕ್ಕೆ ಮಾಡಬೇಕಾದ ತಿದ್ದುಪಡಿ ಏನು?
ಕೇಂದ್ರ ಸರ್ಕಾರ ಹಾಗೂ ವಿಧಾನಸಭೆಗಳ ಅವಧಿ ವಿಸ್ತರಿಸುವುದು ಅಥವಾ ಕಡಿತಗೊಳಿಸುವ ಮಹತ್ವದ ಸಂವಿಧಾನ ತಿದ್ದುಪಡಿಗಳನ್ನು ಮಾಡಬೇಕಿದೆ. ಅದು ಈ ಕೆಳಕಂಡಂತಿದೆ.
ಆರ್ಟಿಕಲ್ 83 (2): ಲೋಕಸಭೆಯ ಅವಧಿಯು ಐದು ವರ್ಷಗಳನ್ನು ಮೀರಬಾರದು ಎಂದು ಅದು ಹೇಳುತ್ತದೆ. ಆದರೆ ಅದನ್ನು ಶೀಘ್ರದಲ್ಲೇ ವಿಸರ್ಜಿಸಬಹುದು.
ಆರ್ಟಿಕಲ್ 85 (2): ವಿಸರ್ಜನೆಯು ಅಸ್ತಿತ್ವದಲ್ಲಿರುವ ಸದನದ ಅವಧಿಯನ್ನು ಕೊನೆಗೊಳಿಸುತ್ತದೆ. ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸದನವನ್ನು ರಚಿಸಲಾಗುತ್ತದೆ.
ಆರ್ಟಿಕಲ್ 172 (1): ರಾಜ್ಯ ವಿಧಾನಸಭೆಗಳ ಅವಧಿ ವಿಸ್ತರಿಸುವುದು ಅಥವಾ ಕಡಿತಗೊಳಿಸುವುದು. ಇದನ್ನೂ ಓದಿ: ಚೀನಾಗೆ ಭಾರತದ ಮೇಲೆ ಕಣ್ಣು ಯಾಕೆ?
ಆರ್ಟಿಕಲ್ 174 (2) (ಬಿ): ಸಂಪುಟದ ನೆರವು ಮತ್ತು ಸಲಹೆ ಮೇರೆಗೆ ವಿಧಾನಸಭೆ ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಬಹುಮತ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಯಿAದ ತಿಳಿದು ಬಂದಾಗ ರಾಜ್ಯಪಾಲರು ತಮ್ಮ ಅಧಿಕಾರ ಚಲಾಯಿಸಬಹುದು.
ಆರ್ಟಿಕಲ್ 356: ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು.
ಒಂದು ರಾಷ್ಟ್ರ ಒಂದು ಚುನಾವಣೆ ಜಾರಿ ಹೇಗೆ?
ಸಾಂವಿಧಾನಿಕ ತಿದ್ದುಪಡಿಗಾಗಿ, ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರು ಮತದಾನಕ್ಕೆ ಹಾಜರಿರಬೇಕು. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳ ಒಮ್ಮತದ ಅಗತ್ಯವಿದೆ. ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ, ಅದನ್ನು ಭಾರತದ ಅರ್ಧದಷ್ಟು ರಾಜ್ಯಗಳು ತಮ್ಮ ಅಸೆಂಬ್ಲಿಗಳಲ್ಲಿ ನಿರ್ಣಯಗಳ ಮೂಲಕ ಅನುಮೋದಿಸಬೇಕಾಗುತ್ತದೆ.
ಇದಕ್ಕೂ ಬೇಕು ಅಪಾರ ಸಂಪನ್ಮೂಲ
ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ಚುನಾವಣೆಗಳನ್ನು ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ತಂದರೂ ಅಪಾರ ಸಂಪನ್ಮೂಲ ಬೇಕಾಗುತ್ತದೆ. ಮತದಾನ ನಡೆಸಲು 25 ಲಕ್ಷಕ್ಕೂ ಹೆಚ್ಚು ಇವಿಎಂ ಮತ್ತು 25 ಲಕ್ಷ ವಿವಿಪ್ಯಾಟ್‌ಗಳು ಬೇಕಾಗಬಹುದು. ಚುನಾವಣಾ ಆಯೋಗವು ಈಗ ಕೇವಲ 12 ಲಕ್ಷ ಇವಿಎಂಗಳನ್ನು ಮಾತ್ರ ಹೊಂದಿದೆ. ಇದನ್ನೂ ಓದಿ: ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?
2014ರಲ್ಲಿ ಬಿಜೆಪಿ ನೀಡಿದ್ದ ಭರವಸೆ ಏನು?
ಬಿಜೆಪಿ ತನ್ನ 2014 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಭರವಸೆ ನೀಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ರಾಷ್ಟ್ರೀಯ ಮತ್ತು ಪ್ರಾಂತೀಯ ಶಾಸಕಾಂಗಗಳಿಗೆ ಐದು ವರ್ಷಗಳ ಬಳಿಕ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುತ್ತದೆ. ಎರಡು ವರ್ಷಗಳ ನಂತರ ಪುರಸಭೆಯ ಚುನಾವಣೆಗಳನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಸ್ವೀಡನ್‌ನಲ್ಲಿ, ರಾಷ್ಟ್ರೀಯ ಶಾಸಕಾಂಗ (ರಿಕ್ಸ್ಡಾಗ್) ಮತ್ತು ಪ್ರಾಂತೀಯ ಶಾಸಕಾಂಗ/ಕೌAಟಿ ಕೌನ್ಸಿಲ್ (ಲ್ಯಾಂಡ್‌ಸ್ಟಿಂಗ್) ಮತ್ತು ಸ್ಥಳೀಯ ಸಂಸ್ಥೆಗಳು/ಮುನ್ಸಿಪಲ್ ಅಸೆಂಬ್ಲಿಗಳಿಗೆ ಚುನಾವಣೆಗಳನ್ನು ನಿಗದಿತ ದಿನಾಂಕದಂದು ನಡೆಸಲಾಗುತ್ತದೆ.
Web Stories