ಬೆಂಗಳೂರು: ಮಸೀದಿ ಹಾಗೂ ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನ ಈಗ ಆರಂಭವಾಗಿದೆ.
ಹೌದು. ಮದರಸಾದಲ್ಲಿ ಇಸ್ಲಾಂ ಮೂಲಭೂತವಾದವನ್ನು ತುಂಬಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಬಹುದೊಡ್ಡ ಆರೋಪ ಮಾಡುತ್ತಿವೆ. ಮದರಸಾವನ್ನೇ ಬ್ಯಾನ್ ಮಾಡಬೇಕು ಎಂದು ಬಿಜೆಪಿ ನಾಯಕರೇ ಸರ್ಕಾರಕ್ಕೆ ಬಹಿರಂಗವಾಗಿ ಒತ್ತಾಯಿಸಿದ್ದರು. ಈ ಮಧ್ಯೆ ಈಗ ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನ ಆರಂಭವಾಗಿದೆ.
Advertisement
ಮಸೀದಿಯಲ್ಲಿ ಹಾಗೂ ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನಕ್ಕೆ ಬೆಂಗಳೂರಿನ ಖಾಸಿಂ ಸಾಬ್ ಚಾಲನೆ ಕೊಟ್ಟಿದ್ದಾರೆ. ಇದಕ್ಕಾಗಿ ಸಂಘಟನೆಯನ್ನು ಕಟ್ಟಿಕೊಂಡು ಈಗಾಗಲೇ ಅನೇಕ ಮಸೀದಿ, ಮದರಸಾಕ್ಕೂ ಭೇಟಿ ಕೊಟ್ಟು ಗ್ರೀನ್ ಸಿಗ್ನಲ್ ಕೂಡ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?
Advertisement
Advertisement
ಮಸೀದಿಯಲ್ಲಿ ಐದು ಬಾರಿ ಪ್ರಾರ್ಥನೆ ನಡೆಯುತ್ತದೆ. ಮದರಸಾದ ಶಿಕ್ಷಣದ ಜೊತೆಗೆ ಪ್ರಾರ್ಥನೆಯ ಬಳಿಕ ಸಂವಿಧಾನದ ಬಗ್ಗೆ ಆಯಾಯ ಭಾಷೆಯಲ್ಲಿ ಅರಿವು ಮೂಡಿಸುವ ಅಭಿಯಾನವನ್ನು ಆಗಸ್ಟ್ 15ರಿಂದ ಜನವರಿ 26ರವರೆಗೆ ನಡೆಸಲಾಗುತ್ತದೆ.
Advertisement
ಕಾನೂನು ಸಂವಿಧಾನದ ಅರಿವು ಮುಸ್ಲಿಂ ಸಮುದಾಯದಲ್ಲಿ ಕಡಿಮೆ ಇದೆ. ಹೀಗಾಗಿ ಈ ಅಭಿಯಾನದ ಅನಿವಾರ್ಯತೆ ಇದೆ ಎಂದು ಅಭಿಯಾನ ಆರಂಭಿಸಿರುವ ಖಾಸಿಂ ಸಾಬ್ ತಿಳಿಸಿದ್ದಾರೆ.