ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ತಿನಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮಕ್ಕೆ 14 ವಿರೋಧ ಪಕ್ಷಗಳು ಗೈರಾಗಿದ್ದವು. ಇಂದು ನಡೆದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
Advertisement
ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷವಾಗಿದೆ… ಈ ಬಗ್ಗೆ ನಾನು ಹೆಚ್ಚು ಹೇಳಬೇಕೆ? ಒಂದೇ ಕುಟುಂಬ ಹಲವು ತಲೆಮಾರುಗಳ ತನಕ ಪಕ್ಷವೊಂದನ್ನು ನಡೆಸುವುದು ಆರೋಗ್ಯಕರ ಪ್ರಜಾಪ್ರಭುತ್ವವಾಗಲಾರದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ನೀಡಬೇಕು – ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಧಾನಿಗೆ ಪತ್ರ
Advertisement
Addressing the programme to mark Constitution Day in Central Hall. https://t.co/xmMbNn6zPV
— Narendra Modi (@narendramodi) November 26, 2021
Advertisement
ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಳ್ಳುವುದು, ಸಂವಿಧಾನದ ಆತ್ಮ ಹಾಗೂ ಸಂವಿಧಾನದ ಎಲ್ಲಾ ವಿಧಿಗಳಿಗೂ ಎಸಗಿದ ದ್ರೋಹವಾಗುತ್ತದೆ. ಪ್ರಜಾಸತ್ತಾತ್ಮಕ ಗುಣಗಳೇ ಇಲ್ಲದ ಕೆಲವು ಪಕ್ಷಗಳಿಂದ ಪ್ರಜಾಪ್ರಭುತ್ವ ರಕ್ಷಣೆ ಹೇಗಾಗುತ್ತದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅಂತ ಕನಸು ಕಾಣ್ತಿದ್ದಾರೆ, ಮೂರ್ಖತನದ ಪರಮಾವಧಿ: ಬಿ.ಸಿ.ಪಾಟೀಲ್
Advertisement
ಸಂವಿಧಾನ ದಿನ ನಾವು ಈ ಸದನಕ್ಕೆ ವಂದಿಸಬೇಕು. ಸಂವಿಧಾನ ನೀಡಲು ಸಾಕಷ್ಟು ಜನರು ಪರಿಶ್ರಮಪಟ್ಟಿದ್ದಾರೆ. ನಮ್ಮ ಸಂವಿಧಾನವು ನಮ್ಮ ವೈವಿಧ್ಯಮಯ ದೇಶವನ್ನು ಬೆಸೆಯುತ್ತಿದೆ. ಹಲವು ಅಡೆತಡೆಗಳ ನಂತರ ಇದನ್ನು ರಚಿಸಲಾಗಿದೆ. ದೇಶದಲ್ಲಿನ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಲಾಗಿದೆ. ಮಹಾತ್ಮ ಗಾಂಧಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಪ್ರಥಮ ಕಾನೂನು ಸಚಿವ ಡಾ. ಬಿ.ಆರ್.ಅಂಬೇಡ್ಕರ್ ಅವರ ಗೌರವಾರ್ಥ ದೇಶದಲ್ಲಿ 2015ರಲ್ಲಿ ಪ್ರಥಮ ಬಾರಿಗೆ ಸಂವಿಧಾನ ದಿನವನ್ನು ಆಚರಿಸಲಾಯಿತು. ಸಂವಿಧಾನ ಕರಡು ರಚನೆಯಲ್ಲಿ ಅಂಬೇಡ್ಕರರ ಪಾತ್ರ ಪ್ರಮುಖವಾದದ್ದು. ವಿಶ್ವದ ಸಂವಿಧಾನಗಳ ಪೈಕಿ ಭಾರತದ ಸಂವಿಧಾನ ದೊಡ್ಡದು ಎಂದು ಗುರುತಿಸಲಾಗಿದೆ.