ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಂವಿಧಾನ ದಿನದ (Constitution Day) ಅಂಗವಾಗಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ (Dr B.R.Ambedkar) ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಭಾರತೀಯ ಸಂವಿಧಾನದ ಪಿತಾಮಹನಿಗೆ ಕೈ ಮುಗಿದು 7 ಅಡಿ ಎತ್ತರದ ಶಿಲ್ಪಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್ ವಾರ್ನಿಂಗ್
Advertisement
Advertisement
ರಾಷ್ಟ್ರಪತಿ ಮುರ್ಮು ಮತ್ತು ಸಿಜೆಐ ಚಂದ್ರಚೂಡ್ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಉನ್ನತ ನ್ಯಾಯಾಲಯದ ಹಲವು ನ್ಯಾಯಾಧೀಶರು ಭಾಗವಹಿಸಿದ್ದರು. ಇದನ್ನೂ ಓದಿ: ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ
Advertisement
Advertisement
1949ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಮೊದಲು ಈ ದಿನವನ್ನು ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. ಇದನ್ನೂ ಓದಿ: ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ