ನವದೆಹಲಿ: ಕರ್ನಾಟಕ ರಾಜ್ಯಾದ್ಯಂತ ಹಲಾಲ್‌ಕಟ್, ಝಟ್ಕಾಕಟ್ ವಿವಾದದ ನಡುವೆ ಇದೀಗ ರಾಷ್ಟ್ರಮಟ್ಟದಲ್ಲಿ `ಮೀಟ್ ಬ್ಯಾನ್’ (ಮಾಂಸ ನಿಷೇಧ) ಅಭಿಯಾನ ತಲೆ ಎತ್ತಿದೆ. ಒಂದೆಡೆ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸುವಂತೆ ದೆಹಲಿಯಲ್ಲಿ ಮೀಟ್ ಬ್ಯಾನ್ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ ಮುಸ್ಲಿಂ ಬಾಂದವರು ಸಹ ಪವಿತ್ರ ರಂಜಾನ್ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, ಸಂವಿಧಾನವು ತನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶ ನೀಡುತ್ತದೆ. ಅದೇ ರೀತಿ ಅಂಗಡಿಯವರಿಗೆ ವ್ಯಾಪಾರ ನಡೆಸಲೂ ಸ್ವಾತಂತ್ರ್ಯ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ
Advertisement
Advertisement
ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ಕೆಲ ಭಾಗಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೇಯರ್ ಮುಖೇಶ್ ಸೂರ್ಯನ್ ಅವರು ಸೂಚಿಸಿರುವ ಬೆನ್ನಲ್ಲೇ ಮೊಯಿತ್ರಾ ಈ ಹೇಳಿಕೆ ನೀಡಿದ್ದಾರೆ.
Advertisement
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರತಿಯೊಬ್ಬರು ರಂಜಾನ್ ಸಮಯದಲ್ಲಿ ಸಾರ್ವಜನಿಕವಾಗಿ ಮಾಂಸಾಹಾರ ಸೇವನೆ ಮಾಡುವುದನ್ನು ನಿಷೇಧಿಸಬೇಕು. ರಂಜಾನ್ ಸಮಯದಲ್ಲಿ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಊಟ ಮಾಡುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಮುಸ್ಲಿಮೇತರರು, ಪ್ರವಾಸಿಗರು ಹಾಗೂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾಂಸಾಹಾರ ಸೇವನೆ ಮಾಡುವುದನ್ನು ನಿಷೇಧಿಸುವುದು ಸರಿಯೆಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?
Advertisement
I live in South Delhi.
The Constitution allows me to eat meat when I like and the shopkeeper the freedom to run his trade.
Full stop.
— Mahua Moitra (@MahuaMoitra) April 6, 2022
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ, ಇದು ದೆಹಲಿಗೆ ಮಾತ್ರವಲ್ಲ, ಭಾರತದ ಇತರ ಭಾಗಗಳಿಗೂ ವಿಸ್ತರಿಸಬೇಕು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ವ್ರತ ಹಿಡಿದು ದೇವಿಯನ್ನು ಪೂಜಿಸುತ್ತಾರೆ. ಮುಸ್ಲಿಮರೇ ಆಗಲಿ, ಬೇರೆಯವರೇ ಆಗಲಿ ನಮ್ಮ ಸಂಸ್ಕೃತಿ ಹೇಳುವುದನ್ನು ನಾವು ಗೌರವಿಸಬೇಕು ಹಾಗಾಗಿ ಈ ಕ್ರಮ ದೇಶಾದ್ಯಂತ ಜಾರಿಯಾಗಬೇಕು ಎಂದು ಅವರು ಹೇಳಿದ್ದಾರೆ.
During Ramzan we don’t eat between sunrise & sunset. I suppose it’s OK if we ban every non-Muslim resident or tourist from eating in public, especially in the Muslim dominated areas. If majoritarianism is right for South Delhi, it has to be right for J&K. https://t.co/G5VQylmMvB
— Omar Abdullah (@OmarAbdullah) April 5, 2022
ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಅವರು, ದಕ್ಷಿಣ ದೆಹಲಿಯಲ್ಲಿ ಮಾಂಸ ನಿಷೇಧಿಸುವ ಬಿಜೆಪಿಯ ಕ್ರಮವು ಬೂಟಾಟಿಕೆಯಾಗಿದೆ. ನವರಾತ್ರಿಯಲ್ಲಿ ಮಾಂಸ ಮಾರಾಟ ನಿಷೇಧಿಸುವುದಾದರೆ ಪವಿತ್ರ ರಂಜಾನ್ ತಿಂಗಳಲ್ಲಿ ಮದ್ಯವನ್ನು ಏಕೆ ನಿಷೇಧಿಸಬಾರದು? ನೀವು ನವರಾತ್ರಿಯಲ್ಲಿ ಈರುಳ್ಳಿ ಅಥವಾ ಮಾಂಸವನ್ನು ತಿನ್ನದಿದ್ದರೆ ಇತರರನ್ನು ಏಕೆ ನಿಲ್ಲಿಸಬೇಕು? ಇದು ಪ್ರಜಾಪ್ರಭುತ್ವವೇ? ನಮ್ಮ ಭಾವನೆಗಳು ಮತ್ತು ಸಂವಿಧಾನದ ಬಗ್ಗೆ ಹಕ್ಕುಗಳು ಹೇಳುವುದು ಇದನ್ನೆಯೇ ಎಂದು ಎಂದು ಪ್ರಶ್ನಿಸಿದ್ದಾರೆ.