ಮುಂಬೈ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾನ್ಸ್ ಟೇಬಲ್ ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಪೂರ್ವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಭಾನುವಾರ ಅಮರ್ ಮಹಲ್ ಜಂಕ್ಷನ್ ಸಮೀಪದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಹಿರಾಮನ್ ಚವಾಣ್(35) ಮೃತ ಕಾನ್ಸ್ ಟೇಬಲ್. ಇವರು ವಿನೋಭಾ ಭಾವೆ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಚವಾಣ್ ತನ್ನ ಖಾಸಗಿ ವಾಹನದಲ್ಲಿ ತನ್ನ ಕುಟುಂಬದವರ ಜೊತೆ ಭಾನುವಾರ ಮಧ್ಯಾಹ್ನ ಕುರ್ಲಾ ಸಮೀಪದ ನೆಹರೂ ನಗರದ ಕಡೆ ತೆರಳುತ್ತಿದ್ದರು. ಈ ವೇಳೆ ಅವರು ಕಾರಿನ ನಿಯಂತ್ರಣ ಕಳೆದುಕೊಂಡು ಏಕಾಏಕಿ ಸ್ಕಿಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು, ಬಳಿಕ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ್ದಾರೆ.
ಪರಿಣಾಮ ಚವಾಣ್ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಕಾರಿನಲ್ಲಿದ್ದ ನಾಲ್ವರನ್ನು ಸಮೀಪದ ಸೋಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚವಾಣ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇತರರು ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ನೆಹರು ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಸಂಜಯ್ ಕಾಲೆ ತಿಳಿಸಿದ್ದಾರೆ.
ಚವಾಣ್ 2009 ರಲ್ಲಿ ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದಾರೆ. ವಿನೋಬಾ ಭಾವೆ ನಗರ ಪೊಲೀಸ್ ಠಾಣೆಗೆ ಸೇರುವ ಮೊದಲು ಚವಾಣ್ ಮುಂಬೈ ಪೊಲೀಸರ ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್ ಟಿ ) ದಲ್ಲಿ ಕಾರ್ಯನಿರ್ವಹಿಸಿದ್ದರು.
One police constable killed in a collision of his car with another vehicle in which 3 members of a family were travelling, on Eastern Expressway in #Mumbai, y'day afternoon. Occupants of the 2nd car were critically injured & case of rash driving was registered against its driver pic.twitter.com/OYeU4SKqjx
— ANI (@ANI) June 18, 2018