ಪುಣೆ: ಮಹಿಳೆಯರಿಗೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕಾದ ಪೇದೆಯೊಬ್ಬ ಈಗ ತನ್ನ ಮಹಿಳಾ ಕಾನ್ ಸ್ಟೇಬಲ್ ಒಬ್ಬರು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಸೆರೆಹಿಡಿಯಲು ಹೋಗಿ ಬಂಧನಕ್ಕೆ ಒಳಗಾಗಿದ್ದಾನೆ.
33 ವರ್ಷದ ಮಹಿಳಾ ಕಾನ್‍ಸ್ಟೇಬಲ್ ಸ್ನಾನ ಮಾಡುತ್ತಿರುವುದನ್ನು ಪಕ್ಕದ ಮನೆಯಲ್ಲಿದ್ದ ಸಮೀರ್ ಪಟೇಲ್(30) ವಿಡಿಯೋ ಮಾಡಿದ್ದ. ಈಗ ಮಹಿಳಾ ಪೇದೆಯ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ ಐಪಿಸಿ ಸೆಕ್ಷನ್ 354 ಸಿ, 323, 504 ಮತ್ತು 506 ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ ಪುಣೆ ನಗರದ ಪೊಲೀಸರು ಆರೋಪಿ ಕಾನ್ ಸ್ಟೇಬಲ್ ನನ್ನು (30) ಬಂಧಿಸಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ನಾನು ಮತ್ತು ನನ್ನ ಪತಿ ಪುಣೆಯ ಔಂಧ್‍ನ ಪೊಲೀಸ್ ವಸತಿ ನಿಲಯದಲ್ಲಿ ವಾಸವಾಗಿದ್ದೇವೆ. ಸೋಮವಾರ ನನ್ನ ಕೆಲಸವನ್ನು ಮುಗಿಸಿ ಮನೆಗೆ ಬಂದು ಸ್ನಾನ ಮಾಡಲು ಸ್ನಾನಗೃಹಕ್ಕೆ ಹೋಗಿದ್ದೆ. ಯಾರೋ ಸ್ನಾನಗೃಹ ಕಿಟಕಿಯಿಂದ ನನ್ನನ್ನು ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ನೋಡಿದಾಗ ನನಗೆ ಶಾಕ್ ಆಯ್ತು, ವ್ಯಕ್ತಿಯೊಬ್ಬ ಮೊಬೈಲ್ ಫೋನ್‍ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಈ ವ್ಯಕ್ತಿ ಯಾರು ಎಂದು ತಿಳಿಯಲು ಹೊರಗಡೆ ಬಂದಾಗ ನಾನು ಸಮೀರ್ ನನ್ನು ನೋಡಿದೆ. ಆತ ನನ್ನನ್ನು ಆಕ್ಷೇಪರ್ಹವಾಗಿ ದಿಟ್ಟಿಸಿ ನೋಡುತ್ತಿದ್ದ ಎಂದು ಎಂದು ಮಹಿಳಾ ಕಾನ್‍ಸ್ಟೇಬಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
ಸಂತ್ರಸ್ತೆ ಸಮೀರ್‍ನನ್ನು ಪ್ರಶ್ನಿಸಿದ್ದಾಗ ಆತನ ಕುಟುಂಬದ ಸದಸ್ಯರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಕೆಲ ಗಂಟೆಗಳ ನಂತರ ಹೇಳಿಕೆಯನ್ನು ಪಡೆದುಕೊಂಡೆವು. ತಕ್ಷಣ ಅವನು ಕೆಲಸ ನಿರ್ವಹಿಸುತ್ತಿದ್ದ ಖಾಡಕ್ ಪೊಲೀಸ್ ಠಾಣೆಗೆ ಹೋಗಿ ಬಂಧಿಸಿ ಅವನ ಫೋನ್ ವಶಪಡಿಸಿಕೊಂಡೆವು. ಈ ಘಟನೆಯ ಹಿಂದಿನ ಕಾರಣವನ್ನು ಅವನು ತಿಳಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ದಯಾನಂದ್ ಧೋಮ್ ಹೇಳಿದರು.
Advertisement
ಆರೋಪಿ ಕಾನ್‍ಸ್ಟೇಬಲ್ ಸಮೀರ್ ಪಟೇಲ್ ಜೊತೆಗೆ ಅವನ ಪತ್ನಿ ಪೂನಂ, ತಾಯಿ ಮತ್ತು ತಮ್ಮನನ್ನು ಕೂಡ ಬಂಧಿಸಲಾಗಿದೆ. ಮಂಗಳವಾರ ಆರೋಪಿ ಪಟೇಲ್‍ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಒಂದು ದಿನ ಪೊಲೀಸ್ ಕಸ್ಟಡಿಯಲ್ಲಿ ಇರುವಂತೆ ಆದೇಶ ನೀಡಿದೆ ಎಂದು ತಿಳಿಸಿದರು.
Advertisement