ಬೆಂಗಳೂರು: ವಿಧಾನಸೌಧದ ಭದ್ರತಾ ಡಿಸಿಪಿ ವಿರುದ್ಧ ಕಾರು ಚಾಲಕ ತಿರುಗಿ ಬಿದ್ದಿದ್ದಾರೆ. ನಾಲ್ಕು ಪುಟಗಳಲ್ಲಿ ತನಗಾಗುತ್ತಿರೋ ಅನ್ಯಾಯದ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿ ಪೊಲೀಸ್ ಕಾನ್ಸ್‌ಟೇಬಲ್ ದೂರು ನೀಡಿದ್ದಾರೆ.
ವಿಧಾನಸೌಧ ಭದ್ರತಾ ಡಿಸಿಪಿಯ ಹೆಸರು ಸೂಚಿಸದೇ ವಿಧಾನಸೌದ ಭದ್ರತಾ ಡಿಸಿಪಿ ಎಂದಷ್ಟೇ ದೂರಿನಲ್ಲಿ ಉಲ್ಲೇಖ ಮಾಡಿ ಕಾನ್ಸ್‌ಟೇಬಲ್ (ಚಾಲಕ) ಪವನ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಇಂಗ್ಲೆಂಡ್ ಪ್ರವಾಸ 8 ದಿನ ವಿಸ್ತರಣೆ
Advertisement
Advertisement
ಅವಧಿ ಮೀರಿ ಕೆಲಸ ಮಾಡಿಸುತ್ತಾರೆ. ವಾರದ ರಜೆ ಹೊರತುಪಡಿಸಿ ಉಳಿದಂತೆ ರಜೆ ನೀಡುವುದಿಲ್ಲ. ದಿನದಲ್ಲಿ 13 ರಿಂದ ಹದಿನಾಲ್ಕು ಗಂಟೆ ಕೆಲಸ ಮಾಡಿಸಿಕೊಳ್ತಾರೆ. ದಣಿವಿಲ್ಲದೇ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಡಿಸಿಪಿ ಬಳಿ ಮನವಿ ಮಾಡಿಕೊಂಡಿರೂ ಪುರಷ್ಕರಿಸುತ್ತಿಲ್ಲ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
Advertisement
ದಿನದಲ್ಲಿ 14 ಗಂಟೆ ಕೆಲಸ ಮಾಡುತ್ತಿರುವುದರಿಂದ ನನ್ನ ಆರೋಗ್ಯ ಹದಗೆಟ್ಟಿದೆ. ಕೆಲಸದ ವೇಳೆ ಅನಾಹುತ, ಅವಘಡಗಳಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು: ಕತ್ತಿಗೆ ಹೊರಟ್ಟಿ ತಿರುಗೇಟು
Advertisement
ಕಳೆದ 5 ತಿಂಗಳಿಂದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. 5 ತಿಂಗಳಲ್ಲಿ 50 ದಿನ ಹೊರತುಪಡಿಸಿ ಉಳಿದಂತೆ ಒಬ್ಬನೆ ಚಾಲಕನಾಗಿ ಕೆಲಸ ಮಾಡಿರುತ್ತೇನೆ. ಡಿಸಿಪಿಯವರ ಎರಡು ಕಾರಿಗೆ ಎರಡು ಚಾಲಕರಿದ್ದಾರೆ. ನಾನು ಅಧಿಕೃತವಾಗಿ ಡಿಸಿಪಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಉಳಿದಂತೆ ಇನ್ನೊಬ್ಬ ಚಾಲಕ ಹಾಗೂ ಕಾರನ್ನು ಡಿಸಿಪಿಯವರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರಲು ಬಳಿಸಿಕೊಳ್ಳೊತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಕ್ಕಳಿಗೆ ರಜೆ ಇದ್ದಾಗ ಅವರು ಕರ್ತವ್ಯಕ್ಕೆ ಬಂದರೆ ನನಗೆ ವಿಶ್ರಾಂತಿ ಕೊಡುತ್ತಾರೆಂದು ದೂರಿನಲ್ಲಿ ಕಾನ್ಸ್‌ಟೇಬಲ್ ಪವನ್ ಆರೋಪ ಮಾಡಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಪವನ್ ಡಿಸಿಪಿಗೆ ಬರೆದಿರೋ ಪತ್ರ ಇಲಾಖೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.