– ವಿದ್ಯಾರಣ್ಯಪುರದ ಲಾಡ್ಜ್‌ನಲ್ಲಿ ಸ್ಥಳ ಮಹಜರು
ಬೆಂಗಳೂರು: ಧರ್ಮಸ್ಥಳ (Dharmasthala) ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಲಾಡ್ಜ್ (Lodge) ಒಂದರಲ್ಲಿ ವಿಶೇಷ ತನಿಖಾ ತಂಡ (SIT) ಮಹಜರು ಪ್ರಕ್ರಿಯೆ ನಡೆಸುತ್ತಿದೆ.
ಆರೋಪಿ ಚಿನ್ನಯ್ಯನನ್ನು (Chinnayya) ಕರೆದುಕೊಂಡು ಬಂದ ಪೊಲೀಸರು ತಡರಾತ್ರಿಯಿಂದ ಲಾಡ್ಜ್‌ನಲ್ಲಿ ಮಹಜರು ಮಾಡುತ್ತಿದ್ದಾರೆ. ಈ ಲಾಡ್ಜ್‌ನಲ್ಲಿ ಬುರುಡೆ ಗ್ಯಾಂಗ್ ಸದಸ್ಯರು ಸೇರಿ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ
ಬುರುಡೆ ತೆಗೆದುಕೊಂಡು ಬರುವ ಮೊದಲು ಇದೇ ಲಾಡ್ಜ್‌ನಲ್ಲಿ ಹಲವರನ್ನು ಭೇಟಿಯಾಗಿದ್ದ ಬಗ್ಗೆ ಎಸ್‌ಐಟಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಹೀಗಾಗಿ ಎಸ್ ಪಿ ಸೈಮನ್ ನೇತೃತ್ವದಲ್ಲಿ ಸುಮಾರು 20 ಮಂದಿ ಅಧಿಕಾರಿಗಳು, ಸಿಬ್ಬಂದಿಯಿಂದ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ಇದನ್ನೂ ಓದಿ: ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ
ಈ ಲಾಡ್ಜ್‌ನಿಂದ ಕೇವಲ ಎರಡು ಕಿಲೋಮೀಟರ್ ಹತ್ತಿರದಲ್ಲೇ ಗಿರೀಶ್ ಮಟ್ಟಣ್ಣನವರ್ (Girish Mattannavar) ವಾಸದ ಫ್ಲ್ಯಾಟ್ ಇದೆ. ಚಿನ್ನಯ್ಯನ ಜೊತೆಗೆ ಮಟ್ಟಣ್ಣನವರ್, ಸೇರಿದಂತೆ ಹಲವರು ಇದೇ ಜಾಗದಲ್ಲಿ ಭೇಟಿ ಆಗಿದ್ದಾರೆ ಎನ್ನಲಾಗುತ್ತಿದೆ.