ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ (Dharmasthala) ವಿರುದ್ಧದ ಷಡ್ಯಂತ್ರ್ಯ ನಡೆಸಿದ ಪ್ರಕರಣದಲ್ಲಿ ದೂರು ನೀಡಿದವರೇ ಆರೋಪಿಗಳಾಗಿದ್ದಾರೆ. ವಿಶೇಷ ತನಿಖಾ ತಂಡದ (SIT) ವರದಿಯಲ್ಲಿ ಬುರುಡೆ ಗ್ಯಾಂಗ್ ಷಡ್ಯಂತ್ರ್ಯ ಬಟಾಬಯಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ (Court) ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ. ಬುರುಡೆ ಗ್ಯಾಂಗ್ ಸದಸ್ಯರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ ಗಳ ಸುರಿಮಳೆ ಹೊರಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್- ತಿಮರೋಡಿ, ಮಟ್ಟಣ್ಣನವರ್, ಜಯಂತ್, ವಿಠಲ ಗೌಡ, ಜಯಂತ್ ಪಾತ್ರ ಏನು?
ಆರೋಪಿಗಳು ಯಾರು?
ಎ1 – ಚಿನ್ನಯ್ಯ
ಎ2 – ಮಹೇಶ್ ಶೆಟ್ಟಿ ತಿಮರೋಡಿ
ಎ3 – ಗಿರೀಶ್ ಮಟ್ಟಣ್ಣನವರ್
ಎ4 – ವಿಠಲ ಗೌಡ
ಎ5 – ಜಯಂತ್ ಟಿ
ಎ6 – ಸುಜಾತ ಭಟ್
ಯಾವ ಸೆಕ್ಷನ್ ಹಾಕಲಾಗಿದೆ?
BNS 211(ಎ) – Criminal Intimidation / ಅಪರಾಧಿಕ ಬೆದರಿಕೆ
ವಿವರಣೆ – ಯಾರಾದರೂ ಮತ್ತೊಬ್ಬ ವ್ಯಕ್ತಿಗೆ ಹಾನಿ ಮಾಡುವುದಾಗಿ, ಸಾವು, ಗಾಯ, ಆಸ್ತಿ ನಾಶ, ಮಾನಹಾನಿ, ಅಥವಾ ಯಾವುದೇ ಅನಿಷ್ಟ ಪರಿಣಾಮ ಉಂಟುಮಾಡುವುದಾಗಿ ಉದ್ದೇಶಪೂರ್ವಕವಾಗಿ ಬೆದರಿಸುವುದು
BNS 230 – Wrongful Restraint / ಅನ್ಯಾಯವಾದ ನಿರ್ಬಂಧ.
ವಿವರಣೆ – ಯಾವ ವ್ಯಕ್ತಿಯೂ ತನ್ನ ಇಚ್ಚೆಯಂತೆ ತೆರಳಬೇಕಾದ ದಾರಿಗೆ ಅಡ್ಡಿ ಉಂಟುಮಾಡಿ, ಆ ವ್ಯಕ್ತಿಯನ್ನು ಉದ್ದೇಶಪೂರ್ವಕ ತಡೆಯುವುದು.
BNS 231 – Wrongful Confinement / ಅನ್ಯಾಯವಾದ ಬಂಧನ
ವಿವರಣೆ – ವ್ಯಕ್ತಿಯ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಒಬ್ಬರನ್ನು ನಿಯಂತ್ರಿತ ಸ್ಥಳದಲ್ಲಿ ಬಲವಂತವಾಗಿ ಇರಿಸುವುದು.
BNS 229 – Force / ಬಲ ಪ್ರಯೋಗ
ವಿವರಣೆ – ಯಾವ ವ್ಯಕ್ತಿಗೆ ಅವನ ಇಚ್ಛೆಗೆ ವಿರುದ್ಧವಾಗಿ ಯಾವುದಾದರೂ ವಸ್ತು, ಬಲ, ಒತ್ತಡ, ದಬ್ಬಾಳಿಕೆ ನಡೆಸುವುದು.
BNS 227 – Assault / ದಾಳಿ
ವಿವರಣೆ – ಯಾರಿಗಾದರೂ ಶಾರೀರಿಕ ಹಾನಿ ಮಾಡುವ ಉದ್ದೇಶದ ಸೂಚನೆ ನೀಡುವುದು. ಇದನ್ನೂ ಓದಿ: ಹಣ ಪಡೆದು ಬುರುಡೆ ಕಥೆ ಕಟ್ಟಿದ್ದ ಚಿನ್ನಯ್ಯ – ಎಸ್‌ಐಟಿ ವರದಿಯಲ್ಲಿ ಏನಿದೆ?
BNS 228 – Criminal Force / ಅಪರಾಧಿಕ ಬಲ ಬಳಕೆ
ವಿವರಣೆ – ಉದ್ದೇಶಪೂರ್ವಕವಾಗಿ,ಅಪಮಾನ / ಹಾನಿ / ಭಯ ಹುಟ್ಟಿಸುವುದು.
BNS 240 – Extortion / ದಬ್ಬಾಳಿಕೆ ಮೂಲಕ ಹಣ/ಆಸ್ತಿ ಪಡೆಯುವುದು
ವಿವರಣೆ – ಹಾನಿ ಮಾಡುವುದಾಗಿ, ಭಯ ಹುಟ್ಟಿಸಿ ಹಣ/ಆಸ್ತಿ/ಕಾಗದ/ಮೌಲ್ಯಾವಸ್ತು ನೀಡುವಂತೆ ಬೆದರಿಸುವುದು.
BNS 236 – False Declaration / ತಪ್ಪು ಘೋಷಣೆ ಸಲ್ಲಿಸುವುದು
ವಿವರಣೆ – ಕೋರ್ಟ್ ಅಥವಾ ಅಧಿಕಾರಿಗಳ ಮುಂದೆ ತಿಳಿದಿದ್ದೂ ತಪ್ಪು ಮಾಹಿತಿ ನೀಡಿ ನಂಬಲರ್ಹ ಮಾಹಿತಿಯನ್ನು ಘೋಷಣೆ ಮೂಲಕ ಉಲ್ಲೇಖಿಸುವುದು.
BNS 233 – Cheating / ಮೋಸ
ವಿವರಣೆ – ಒಬ್ಬರನ್ನು ತಪ್ಪಾಗಿ ನಂಬಿಸಿ, ಮತಿಭ್ರಮೆಯಲ್ಲಿ, ವಂಚನೆ ಮಾಡಿ, ಆಸ್ತಿ/ಹಣ/ಲಾಭ ಮಾಡುವುದು.
BNS 248 – Criminal Breach of Trust / ನಂಬಿಕೆ ದ್ರೋಹ
ವಿವರಣೆ – ನಂಬಿಸಿ ದುರುಪಯೋಗಪಡಿಸಿಕೊಳ್ಳುವುದು.
BNS 336(4) – Public Nuisance endangering public life ಸಾರ್ವಜನಿಕ ಜೀವನವನ್ನ ಅಪಾಯಕ್ಕೆ ಸಿಲುಕಿಸುವ ಕಿರಿಕಿರಿ
ವಿವರಣೆ – ಸಾರ್ವಜನಿಕ ಸ್ಥಳದಲ್ಲಿ,ಸಾರ್ವಜನಿಕರ ಜೀವ/ಆರೋಗ್ಯ/ಸುರಕ್ಷತೆಗೆ ಹಾನಿ ಉಂಟುಮಾಡುವ ಯಾವುದೇ ಕೃತ್ಯ.
BNS 61(2) – Common Intention / ಸಹ ಉದ್ದೇಶ
ವಿವರಣೆ – ಎರಡು ಅಥವಾ ಹೆಚ್ಚು ಜನರು ಒಂದು ಸಾಮೂಹಿಕ ಉದ್ದೇಶದಿಂದ ಒಂದೇ ಅಪರಾಧವನ್ನು ಸೇರಿ ಮಾಡಿದರೆ,ಪ್ರತಿಯೊಬ್ಬರೂ ಪೂರ್ಣ ಅಪರಾಧಕ್ಕೆ ಜವಾಬ್ದಾರರು.

