ನವದೆಹಲಿ: ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ (MCD Election) ಟಿಕೆಟ್ ಮಾರಾಟ ಮಾಡಿರುವ ಆರೋಪದ ಬೆನ್ನಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ (Karnataka Election 2023) ಟಿಕೆಟ್ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
200 ಕೋಟಿ ಸುಲಿಗೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಕರ್ನಾಟಕ ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾನೆ. ಇದನ್ನೂ ಓದಿ: ʼಸರ್ʼ, ʼಮೇಡಂʼ ಅನ್ನುವಂತಿಲ್ಲ.. ʼಟೀಚರ್ʼ ಎನ್ನಬೇಕು – ಕೇರಳ ಮಕ್ಕಳ ಹಕ್ಕುಗಳ ಆಯೋಗ
Advertisement
Advertisement
ಈ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ ಕುಮಾರ್ ಸಕ್ಸೇನಾಗೆ (Vinai Kumar Saxena) ಪತ್ರ ಬರೆದಿದ್ದು, ತನ್ನ ವಕೀಲರ ಮೂಲಕ ಪತ್ರ ರವಾನಿಸಿರುವ ಸುಕೇಶ್, ಆಮ್ ಅದ್ಮಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಸಾಕ್ಷ್ಯಗಳನ್ನು ನನ್ನ ಬಳಿ ಇವೆ. ಅವುಗಳನ್ನು ವಾಪಸ್ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹಾಗೂ ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಜೈಲು ಅಧಿಕಾರಿಗಳ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ
Advertisement
Advertisement
ಡಿಸೆಂಬರ್ 31 ರಂದು ಜೈಲು ಅಧಿಕಾರಿ ರಾಜ್‌ಕುಮಾರ್ ಮೂಲಕ ಆಮಿಷವೊಡ್ಡಲಾಗಿದ್ದು, ಸರ್ಕಾರದ ವಿರುದ್ಧದ ಸಾಕ್ಷ್ಯಗಳನ್ನು ನೀಡಿದ್ದಲ್ಲಿ ಅದರ ಬದಲಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಪ್ (AAP) ಟಿಕೆಟ್ ಮಾರಾಟಕ್ಕೆ ಜವಬ್ದಾರಿ ನೀಡಲಾಗುವುದು ಮತ್ತು ಪಂಜಾಬ್ ನಲ್ಲಿ ಮರುಳು ಗಣಿಗಾರಿಕೆಗೆ ಗುತ್ತಿಗೆ ನೀಡುವ ಭರವಸೆ ನೀಡಲಾಗಿದೆ. ಒಂದು ವೇಳೆ ಇದಕ್ಕೆ ಒಪ್ಪಿಗೆ ನೀಡದಿದ್ದಲ್ಲಿ ಬೇರೆ ಜೈಲಿಗೆ ವರ್ಗಾವಣೆ ಮಾಡುವ ಬ್ಲಾಕ್‌ಮೇಲ್ ಸಹ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾನೆ.
ದೆಹಲಿ ಕಾರ್ಪೊರೇಷನ್ ಚುನಾವಣೆ ವೇಳೆಯೂ ಆಪ್ ಅಭ್ಯರ್ಥಿಗಳಿಗೆ ಟಿಕೆಟ್ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿಲಾಗಿತ್ತು. ರಹಸ್ಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕರು ಟಿಕೆಟ್ ಫಾರ್ ಸೇಲ್ ಎಂದು ಅರವಿಂದ್ ಕೇಜ್ರಿವಾಲ್ ಅವರನ್ನ ಕುಟುಕಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k