ಚಂಡೀಗಢ: ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಸಯಾಮಿ ಅವಳಿಗಳಾದ ಸೋಹನ್ ಸಿಂಗ್ ಹಾಗೂ ಮೋಹನ್ ಸಿಂಗ್ ಅಮೃತಸರ ಜಿಲ್ಲೆಯ ಮನ್ವಾಲ್ ಪ್ರದೇಶದಲ್ಲಿ ಮತ ಚಲಾಯಿಸಿದ್ದಾರೆ.
ಸಯಾಮಿ ಅವಳಿಯನ್ನು ಪ್ರತ್ಯೇಕ ಮತದಾರರನ್ನಾಗಿ ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಚುನಾವಣಾ ಅಧಿಕಾರಿ ಅವರಿಗೆ (ಆರ್‌ಒ) ಮತ ಚಲಾವಣೆಯ ಗೌಪ್ಯತೆ ಕಾಪಾಡಲು ಕನ್ನಡಕಗಳನ್ನು ನೀಡಿದ್ದಾರೆ.
Advertisement
ಸೋಹನ್ ಹಾಗೂ ಮೋಹನ್ 2021ರಲ್ಲಿ 18 ವರ್ಷಕ್ಕೆ ಕಾಲಿಟ್ಟಿದ್ದು, ಅವರು ಸಯಾಮಿ ಅವಳಿಗಳಾಗಿದ್ದರೂ ಎರಡು ಪ್ರತ್ಯೇಕ ಚುನಾವಣಾ ಗುರುತಿನ ಚೀಟಿ ಪಡೆದಿದ್ದಾರೆ. ಇದು ಅವರಿಬ್ಬರ ಮೊದಲ ಮತದಾನವೂ ಆಗಿದೆ. ಇದನ್ನೂ ಓದಿ: 58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು
Advertisement
Advertisement
ಸೋಹನ್ ಹಾಗೂ ಮೋಹನ್ 2003ರ ಜೂನ್ 13ರಂದು ಜನಿಸಿದ್ದು, ಪೋಷಕರು ಅವಳಿ ಮಕ್ಕಳ ಕೈಬಿಟ್ಟಿದ್ದರು. ಹೀಗಾಗಿ ಅಮೃತಸರದ ಅನಾಥಾಶ್ರಮ ಈ ಅವಳಿಗಳನ್ನು ದತ್ತು ತೆಗೆದುಕೊಂಡಿತ್ತು. ಇದೀಗ ಈ ಸಯಾಮಿ ಅವಳಿಗಳು ಮತ ಚಲಾಯಿಸಿರುವುದೇ ವಿಶೇಷ ಪ್ರಕರಣವಾಗಿದೆ. ಇದನ್ನೂ ಓದಿ: ಚೀನಾ-ಭಾರತದ ಸಂಬಂಧ ಬಿಗಡಾಯಿಸುತ್ತಿದೆ: ಜೈಶಂಕರ್
Advertisement
ಭಾನುವಾರ ಪ್ರಾರಂಭವಾದ ಮತದಾನ ಬೆಳಗ್ಗೆ 8 ಗಂಟೆಯಿAದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.