ನವದೆಹಲಿ: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪುಲ್ವಾಮಾ ದಾಳಿ (Pulwama Attack) ನಡೆದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. ಇದು ಅತ್ಯಂತ ದುಃಖಕರ, ಆತಂಕಕಾರಿ ಹಾಗೂ ದೇಶ ವಿರೋಧಿ ಹೇಳಿಕೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ (Gaurav Bhatia) ಆರೋಪಿಸಿದ್ದಾರೆ.
Advertisement
ಜಿ. ಪರಮೇಶ್ವರ್ (G.Parameshwar) ಹೇಳಿಕೆ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇಂದಿನ ಕಾಂಗ್ರೆಸ್‌ನ (Congress) ಪಾತ್ರ ಭಾರತ ವಿರೋಧಿ ಎಂಬುದು ನಂಬಿಕೆಗೆ ಮೀರಿದ್ದು. ಅವರ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಬಾಲಾಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲೂ ಕಾಂಗ್ರೆಸ್, ಎಸ್‌ಪಿ (SP) ಮತ್ತು ಆಮ್ ಆದ್ಮಿ (AAP) ಪಕ್ಷಗಳು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದವು, ದಾಳಿಗೆ ಇದಕ್ಕೆ ಸಾಕ್ಷಿ ಕೇಳಿದ್ದವು. ಈಗ ಜಿ.ಪರಮೇಶ್ವರ್ ಹೇಳಿಕೆಯಲ್ಲೂ ಅದೇ ಭಾರತ ವಿರೋಧಿ ಪಾತ್ರ ಎದ್ದು ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್‌ಗೆ ಅಂತಹ ನಿಲುವು ಇದ್ದರೆ, ಕಾಂಗ್ರೆಸ್‌ನ ಈ ಕ್ರಮಗಳಿಗೆ ಭಾರತದಲ್ಲಿ ಸ್ಥಾನವಿಲ್ಲ ಎಂದು ಹೇಳಬಹುದು. ನೀವು ಭಾರತೀಯ ಸೇನೆಯಿಂದ ಪುರಾವೆ ಕೇಳುತ್ತೀರಿ, ನೀವು ಭಾರತೀಯರೇ ಅಥವಾ ಅಲ್ಲವೇ ಎಂದು ದೇಶದ ಜನರು ನಿಮ್ಮನ್ನು ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟ ಪ್ರಕರಣ – ತನಿಖೆಗೆ ತೆರಳಿದ್ದ ಎನ್‍ಐಎ ಅಧಿಕಾರಿಗಳ ಕಾರಿನ ಮೇಲೆ ದಾಳಿ