ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಪ್ಯಾಲೆಸ್ಟೈನ್ ಹಕ್ಕುಗಳನ್ನು (Palestinian Rights) ಬೆಂಬಲಿಸಿ ನಿರ್ಣಯ ಅಂಗೀಕರಿಸಿದೆ.
ಇಂದು ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಇಸ್ರೇಲ್-ಪ್ಯಾಲೆಸ್ಟೈನ್ (Israel-Palestine) ಸಂಘರ್ಷದ ಬಗ್ಗೆ ದುಃಖ ವ್ಯಕ್ತಪಡಿಸಿ ಕದನ ವಿರಾಮಕ್ಕೆ ಕರೆ ನೀಡಿದೆ. ಅಷ್ಟೇ ಅಲ್ಲದೇ ಪ್ಯಾಲೆಸ್ಟೈನ್ ಜನರ ಹಕ್ಕುಗಳನ್ನು ಬೆಂಬಲಿಸಿದೆ.
Advertisement
Advertisement
ಭಾನುವಾರ ಪ್ಯಾಲೆಸ್ಟೈನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ಖಂಡಿಸಿದ ಒಂದು ದಿನದ ನಂತರ ಕಾಂಗ್ರೆಸ್ (Congress) ಸೋಮವಾರ ಪ್ಯಾಲೆಸ್ಟೀನಿಯಾದವರಿಗೆ ಬೆಂಬಲವನ್ನು ನೀಡಿದೆ. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ
Advertisement
Advertisement
ಸಂಘರ್ಷಕ್ಕೆ ಕಾರಣವಾದ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ಮಾತುಕತೆ ಪ್ರಾರಂಭಿಸಬೇಕೆಂದು ಎಂದು ನಿರ್ಣಯ ಕೈಗೊಂಡಿದೆ. ಇದನ್ನೂ ಓದಿ: ವಿದ್ಯುತ್, ಆಹಾರ, ನೀರು ಪೂರೈಕೆ ಇಲ್ಲ; ಗಾಜಾ ಸಂಪೂರ್ಣ ಸೀಜ್‌ಗೆ ಇಸ್ರೇಲ್ ಆದೇಶ
ಶನಿವಾರ ಹಮಾಸ್ ಉಗ್ರರು (Hamas Militants) ತಮ್ಮ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ (Gaza Strip) ಇಸ್ರೇಲ್ (Israel) ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ (Rocket Attack) ಮಾಡಿದ್ದರು. ಈ ದಾಳಿಯ ಬೆನ್ನಲ್ಲೇ ಇಸ್ರೇಲ್ ಈಗ ಯುದ್ಧ (War) ಘೋಷಣೆ ಮಾಡಿದೆ.
Web Stories