ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಗಳಿಂದಾಗಿ ಆಕ್ರೋಶಗೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
#WATCH | Delhi: Congress MPs begin their march from Parliament to Rashtrapati Bhavan to register their protest over inflation and unemployment. Rahul Gandhi also joined the march. pic.twitter.com/f8JfYII2zZ
— ANI (@ANI) August 5, 2022
Advertisement
ಪ್ರತಿಭಟನೆಯ ಭಾಗವಾಗಿ `ಪ್ರಧಾನಿ ಮನೆಗೆ ಘೆರಾವ್’ ಹಾಕಲು ಮುಂದಾಗಿದೆ. ಈಗಾಗಲೇ ಸಂಸತ್ ಭವನದಿಂದ `ಚಲೋ ರಾಷ್ಟ್ರಪತಿ ಭವನ್’ ಮೆರವಣಿಗೆ ಆರಂಭಿಸಿದ್ದು, ಧಿಕ್ಕಾರ ಕೂಗುತ್ತಾ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು ಮತ್ತು ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ರಾಷ್ಟ್ರಪತಿ ಭವನದವರೆಗೆ ಮೆರವಣಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
Advertisement
#WATCH | Congress interim president & MP Sonia Gandhi leads protest of party MPs against inflation and unemployment, in Parliament pic.twitter.com/ceCIbQ4aLv
— ANI (@ANI) August 5, 2022
Advertisement
ಕಾಂಗ್ರೆಸ್ ಬೃಹತ್ ಪ್ರತಿಭಟನೆಗೂ ಮುನ್ನವೇ ದೆಹಲಿಯ ಕೆಲ ಭಾಗಗಳಲ್ಲಿ ದೊಡ್ಡ-ದೊಡ್ಡ ಸಭೆ, ಸಮಾರಂಭಗಳನ್ನ ನಿಷೇಧಿಸಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಲ್ಯೂಟೆನ್ಸ್ ದೆಹಲಿಯ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಲಿದೆ ಎಂದು ದಿಲ್ಲಿ ಸಂಚಾರ ಪೊಲೀಸರು ಈಗಾಗಲೇ ಸೂಚನೆ ಹೊರಡಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆಯೋ, ಆ ಭಾಗಗಳಲ್ಲಿ ಮಾರ್ಗ ಬದಲಾವಣೆ ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.