ಮಂಡ್ಯ: 2024 ರ ಲೋಕಸಭಾ ಚುನಾವಣೆ (Loksabha Election) ದೃಷಿಯಿಂದ ಆರಂಭವಾದ ಕೈ ಪಕ್ಷದ ಭಾರತ್ ಜೋಡೋ ಯಾತ್ರೆ (Bharat Jodo yatre) ವಿರಾಮದ ಬಳಿಕ ಇಂದಿನಿಂದ ಮತ್ತೆ ಆರಂಭವಾಗಲಿದೆ. ರಾಜ್ಯದಲ್ಲಿ 18 ದಿನಗಳ ಕಾಲ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಇಂದು ರಾಹುಲ್ ಗಾಂಧಿ ಜೊತೆ ಸೋನಿಯಾಗಾಂಧಿ ಸಹ ಹೆಜ್ಜೆ ಹಾಕಲಿದ್ದಾರೆ.
Advertisement
ಮೈಸೂರಿಗೆ ಬಂದಿರುವ ಕಾಂಗ್ರೆಸ್ (Congress) ನ ಭಾರತ್ ಜೋಡೋ ಪಾದಯಾತ್ರೆ ಇದೀಗ 2 ದಿನಗಳ ವಿರಾಮದ ಬಳಿಕ ಪುನಾರಂಭಗೊಳ್ಳಲಿದೆ. ಇಂದು ಮಂಡ್ಯದ ಪಾಂಡವಪುರದ ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆಗೆ ನಾಗಮಂಗಲದ ಚೌಡೇನಹಳ್ಳಿ ಬಳಿ ವಿಶ್ರಾಂತಿ ಪಡೆದು, ಸಂಜೆ 4ಕ್ಕೆ ಪಾದಯಾತ್ರೆ ಆರಂಭಿಸಲಿದ್ದಾರೆ. ಸಂಜೆ 7ಗಂಟೆಗೆ ಮಂಡ್ಯದ ಬ್ರಹ್ಮದೇವರ ಹಳ್ಳಿ ಗ್ರಾಮದಲ್ಲಿ ವ್ಯಾಸ್ತವ್ಯ ಮಾಡಲಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಟಿಆರ್‌ಎಸ್ ಜೊತೆ ಜೆಡಿಎಸ್ ಮೈತ್ರಿ – ಎಚ್‌ಡಿಕೆ ಅಧಿಕೃತ ಘೋಷಣೆ
Advertisement
Advertisement
ಪಾದಯಾತ್ರೆಯ ನೇತೃತ್ವದ ವಹಿಸಿರುವ ರಾಹುಲ್ ಗಾಂಧಿ (Rahul Gandhi) ಭೇಟಿಯಾಗಲು ದೆಹಲಿಯಿಂದ ಬಂದ ಸೋನಿಯಾಗಾಂಧಿ ಕಬಿನಿಯ ಹಿನ್ನಿರಿನಲ್ಲಿರುವ ಆರೆಂಜ್ ಕೌಂಟಿ ರೆಸಾರ್ಟ್‍ನಲ್ಲಿ ವ್ಯಾಸ್ತವ್ಯ ಮಾಡಿದ್ರು. ಇದೇ ವೇಳೆ ಪುತ್ರನೊಂದಿಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ರು. ಪಾದಯಾತ್ರೆಯ 2 ದಿನ ವಿರಾಮ ವೇಳೆ ತಾಯಿಯೊಂದಿಗೆ ವ್ಯಾಸ್ತವ್ಯ ಮಾಡಿದ ರಾಹುಲ್ ಗಾಂಧಿ ನಿನ್ನೆ ಸಂಜೆ ಪಾದಯಾತ್ರೆ ಪುನಾರಂಭವಾಗುವ ಸ್ಥಳಕ್ಕೆ ಬಂದು ಸೇರಿದ್ರು.
Advertisement
ಇಂದು ಮಂಡ್ಯದಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಪುತ್ರನೊಂದಿಗೆ ಸೋನಿಯಾ ಗಾಂಧಿ (Sonia Gandhi) ಹೆಜ್ಜೆ ಹಾಕಲಿದ್ದಾರೆ. ನೇರವಾಗಿ ಪಾದಯಾತ್ರೆಯಲ್ಲಿ ಭಾಗಿಯಾಗುವ ಸೋನಿಯಾಗಾಂಧಿ ಕೆಲ ದೂರ ಹೆಜ್ಜೆ ಹಾಕಿದ ಬಳಿಕ ದೆಹಲಿಗೆ ವಾಪಸ್ ತೆರಳಲಿದ್ದಾರೆ.