ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಅಪಘಾತ ಪ್ರಕರಣ ತಡವಾಗಿ ಬೆಳಕಿಗೆ ಬಂದು ಪೊಲೀಸರು ನಲಪಾಡ್‍ನನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಆದರೆ ಹೀಗೆ ಅಪಘಾತ ಮಾಡಿದ ನಲಪಾಡ್ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಲು ಕಾಂಗ್ರೆಸ್ಸಿನವರೇ ಕಾರಣವಂತೆ. ನಲಪಾಡ್ ಯುವ ಕಾಂಗ್ರೆಸ್ ಬೆಂಗಳೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾನೆ.
Advertisement
ಫೆಬ್ರವರಿ ಅಂತ್ಯದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದ್ದು ಈ ಬಾರಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಬಣದ ಡಾರ್ಕ್ ಹಾರ್ಸ್ ಮೊಹಮ್ಮದ್ ನಲಪಾಡ್. ಈ ಹಿಂದೆ ಹಲ್ಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಲಪಾಡ್‍ನನ್ನು ಯುವ ಕಾಂಗ್ರೆಸ್ಸಿನಿಂದ ವಜಾ ಮಾಡಲಾಗಿತ್ತು. ನಲಪಾಡ್ ಜೈಲಿನಿಂದ ಹೊರ ಬರುತ್ತಿದ್ದಂತೆ ಅಷ್ಟೇ ವೇಗವಾಗಿ ಆತನನ್ನ ಯವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಅದೇ ನಲಪಾಡ್‍ನನ್ನು ಫೆಬ್ರವರಿ ಅಂತ್ಯದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲು ಸಿದ್ದರಾಮಯ್ಯ ಬಣ ಸಿದ್ಧತೆ ನಡೆಸಿತ್ತು. ಇದನ್ನೂ ಓದಿ: ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು
Advertisement
Advertisement
ಆದರೆ ಅಪಘಾತ ಪ್ರಕರಣದಲ್ಲಿ ತಗಲಾಕಿಕೊಂಡ ನಲಪಾಡ್ ಮತ್ತೊಂದು ಅಪವಾದಕ್ಕೆ ಗುರಿಯಾಗಿದ್ದಾನೆ. ಇದರಿಂದ ಕಂಗಾಲಾದ ಶಾಸಕ ಹ್ಯಾರಿಸ್, ನನ್ನ ಮಗನನ್ನ ಯುವ ಕಾಂಗ್ರೆಸ್ಸಿನಲ್ಲಿ ಪ್ರಿನ್ಸ್ ಆಫ್ ಬೆಂಗಳೂರು ಅನ್ನುತ್ತಿದ್ದರು. ಅವನು ರಾಜ್ಯಾಧ್ಯಕ್ಷನಾಗ್ತಾನೆ ಅನ್ನೋ ಕಾರಣಕ್ಕೆ ನಮ್ಮವರೇ ಅವನ ಹೆಸರು ಬಹಿರಂಗವಾಗುವಂತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬಳಿ ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?
Advertisement
ಆದರೆ ತಮ್ಮ ಬಣದಿಂದ ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿಸುವುದು ಇರಲಿ ಇದು ಇನ್ನು ಸರಿ ಹೋಗದ ಹಳೆ ಜೈಲು ಗಿರಾಕಿ ಎಂಬುದನ್ನ ಅರ್ಥ ಮಾಡಿಕೊಂಡ ಸಿದ್ದರಾಮಯ್ಯ, ಏನೂ ಮಾತನಾಡದೆ ಸುಮ್ಮನಾಗಿದ್ದಾರೆ. ಶಾಸಕ ಹ್ಯಾರಿಸ್‍ಗೆ ತಮ್ಮ ಪುತ್ರ ತಪ್ಪು ಮಾಡಿದ್ದಾನೆ ಅನ್ನೋದಕ್ಕಿಂತ ಅವನಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸೋಕೆ ನಮ್ಮವರೇ ಹೀಗೆ ಮಾಡಿದ್ದಾರೆ ಅನ್ನೋದೇ ದೊಡ್ಡ ವಿಷಯವಾಗಿದೆ. ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ ಆಗ್ತಾನೋ ಇಲ್ಲವೋ..? ಆದರೆ ಆತನ ಕಿರಿಕ್‍ಗಳು ಸ್ವತಃ ಸಿದ್ದರಾಮಯ್ಯಗೆ ಇದು ಸರಿಯಲ್ಲ ಅನ್ನಿಸಿದೆ. ಆದರೆ ತಿದ್ದಿಬುದ್ಧಿ ಹೇಳಬೇಕಾದ ಶಾಸಕ ಹ್ಯಾರಿಸ್ ಮಾತ್ರ ತಪ್ಪು ಮಾಡಿದ ಮಗನ ವಿರುದ್ಧ ಕಾಂಗ್ರೆಸ್ಸಿನವರೇ ಮಸಲತ್ತು ಮಾಡಿದ್ದಾರೆ ಎಂದು ಹೊಸ ರಾಗ ತೆಗೆದಿರುವುದಂತೂ ಸುಳ್ಳಲ್ಲ. ಇದನ್ನೂ ಓದಿ: ಸರಣಿ ಅಪಘಾತ ಮಾಡಿ ಬೆಂಟ್ಲಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ನಲಪಾಡ್