ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ಸಿಕ್ಕಿದೆ. ಪಂಚ ಸೋಲಿನ ಹೊಣೆ ಹೊತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ನಾಳೆ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಿಡಬ್ಲುಸಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಗಾಂಧಿ ಕುಟುಂಬದ ಮೇಲೆ ನಿಷ್ಠೆ ಹೊಂದಿರುವವರಿಂದ್ಲೇ ತುಂಬಿರುವ ಕಾರ್ಯಕಾರಣಿ ಮಂಡಳಿ ಇದಕ್ಕೆ ಅವಕಾಶ ನೀಡುತ್ತಾ? ಒಪ್ಪಿಗೆ ಸೂಚಿಸುತ್ತಾ? ಪ್ರತಿಬಾರಿಯಂತೆ ಈ ಸಭೆಯಲ್ಲೂ ಈ ಹೈಡ್ರಾಮಾದಲ್ಲೇ ಮುಗಿಯುತ್ತಾ? ಅಥ್ವಾ ನಿಜವಾಗಿಯೂ ಸೋನಿಯಾ ಕುಟುಂಬ ವರ್ಗ ರಾಜೀನಾಮೆ ನೀಡಿ, ಹೊಸಬರಿಗೆ ಅವಕಾಶ ನೀಡುತ್ತಾ? ಪಕ್ಷದಲ್ಲಿ ಹೊಸ ಗಾಳಿ ಬೀಸುತ್ತಾ ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!
Congress Working Committee (CWC) meeting to be held tomorrow at 4PM at AICC office in Delhi, to discuss poll debacle in 5 states and current political situation pic.twitter.com/wWg3rRwu4f
— ANI (@ANI) March 12, 2022
ನಿನ್ನೆ ರಾತ್ರಿಯಷ್ಟೇ ಗುಲಾಂ ನಬೀ ಆಜಾದ್ ನಿವಾಸದಲ್ಲಿ ಸಭೆ ಸೇರಿದ ಜಿ-23 ನಾಯಕರು, ಕೂಡ್ಲೇ ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ರು. ಶಶಿ ತರೂರ್ ಟ್ವೀಟ್ ಮಾಡಿ, ನಮಗೆ ಯಶಸ್ಸು ಬೇಕಿದ್ರೆ ಬದಲಾವಣೆ ಅನಿವಾರ್ಯ ಎಂದಿದ್ರು. ಆದರೆ ಇದಕ್ಕೆ ಸೋನಿಯಾ ಗಾಂಧಿ ನಿಷ್ಠರು ಮಾತ್ರ, ಗಾಂಧಿ ಕುಟುಂಬದ ನಾಯಕತ್ವ ಇಲ್ಲದೇ ಪಕ್ಷ ಉಳಿಯಲ್ಲ ಅಂತಿದ್ದಾರೆ. ಇದನ್ನೂ ಓದಿ: ಗೋವಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರಾ ಪ್ರಮೋದ್ ಸಾವಂತ್?
ಇತ್ತ ಕಾಂಗ್ರೆಸ್ ಕ್ಯಾನ್ಸರ್‍ಗೆ ಚಿಕಿತ್ಸೆ ಇಲ್ಲ ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ. ಮತ್ತೊಮ್ಮೆ ಉತ್ತರ ಪ್ರದೇಶದ ಚುಕ್ಕಾಣಿ ಹಿಡಿಯಲಿರುವ ಯೋಗಿ ಆದಿತ್ಯ ನಾಥ್, ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಜೆಪಿ ನಡ್ಡಾ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಮಾರ್ಚ್ 16ಕ್ಕೆ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ