– ಆ್ಯಪ್ ಮೂಲಕ ಕಾರ್ಯಕರ್ತರಿಗೆ ವಾಯ್ಸ್ ಮೆಸೇಜ್
ನವದೆಹಲಿ: ಹದಿನೈದು ವರ್ಷಗಳ ಬಳಿಕ ಛತ್ತೀಸ್‍ಗಡದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‍ಗೆ ಈಗ ಸಿಎಂ ಆಯ್ಕೆ ದೊಡ್ಡ ತಲೆ ನೋವು ತಂದಿದೆ. ಸದ್ಯ ಸಿಎಂ ಆಯ್ಕೆಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ದಾರಿಯೊಂದನ್ನ ಕಂಡುಕೊಂಡಿದ್ದು ನೇರವಾಗಿ ಕಾರ್ಯಕರ್ತರ ಮೊರೆ ಹೋಗಿದ್ದಾರೆ.
ಸಿಎಂ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಮುಖ್ಯಮಂತ್ರಿ ಆಯ್ಕೆ ಮಾಡಲು ರಾಹುಲ್ ಗಾಂಧಿ ಹೊಸ ಪ್ಲಾನ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಶಕ್ತಿ ಆ್ಯಪ್ ಮೂಲಕ ಛತ್ತೀಸ್‍ಗಡದ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ರಾಹುಲ್ ಆಡಿಯೋ ಸಂದೇಶ ರವಾನಿಸಿದ್ದಾರೆ.
Advertisement
Advertisement
ರಾಹುಲ್ ಗಾಂಧಿ ಕಳುಹಿಸಿರುವ ಸಂದೇಶದಲ್ಲಿ ಸಿಎಂ ಆಯ್ಕೆ ಬಗ್ಗೆ ಕಾರ್ಯಕರ್ತರಿಗೆ ಅಭಿಪ್ರಾಯ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಸಿಎಂ ಯಾರಾಗಬೇಕು ಎಂಬುದನ್ನ ತಿಳಿಸುವಂತೆ ಮನವಿ ಮಾಡಿದ್ದಾರೆ. ಕಾರ್ಯಕರ್ತರು ನೀಡುವ ಮಾಹಿತಿ ಗುಪ್ತವಾಗಿಡುವ ಭರವಸೆ ನೀಡಿದ್ದು, ಜೊತೆಗೆ ಫ್ರೀ ರೆಕಾರ್ಡ್ಡ್ ಕಾಲ್ ಮೂಲಕವೂ ಕಾರ್ಯಕರ್ತರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ರಾಹುಲ್ ಗಾಂಧಿಯ ಈ ಹೊಸ ಪ್ಲಾನ್ ನಿಂದಾಗಿ ಕಾರ್ಯಕರ್ತರು ಆಯ್ಕೆ ಮಾಡುವ ನಾಯಕ ಸದ್ಯದಲ್ಲೇ ಛತ್ತೀಸ್‍ಗಡದ ಸಿಎಂ ಆಗಲಿದ್ದಾರೆ.
Advertisement
ಆ್ಯಪ್ ಹೇಗೆ ಕೆಲಸ ಮಾಡುತ್ತದೆ?:
ಶಕ್ತಿ ಆ್ಯಪ್ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿಯಿಂದ ರೂಪಿಸಲಾಗಿದ್ದು, ಇಲ್ಲಿ ಕಾರ್ಯಕರ್ತರ ದೂರವಾಣಿ ಸಂಖ್ಯೆ ಮತ್ತು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತೆ. ಒಬ್ಬ ಕಾರ್ಯಕರ್ತ ನಾಲ್ಕು ನಂಬರ್ ನೀಡಬೇಕಿದ್ದು ಚೈನ್ ಲಿಂಕ್ ಮೂಲಕ ಕಾರ್ಯಕರ್ತರ ಪಡೆಯನ್ನು ಕಟ್ಟುವುದು ಕಾಂಗ್ರೆಸ್ ಉದ್ದೇಶವಾಗಿತ್ತು. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕುಳಿತು ಆ್ಯಪ್ ನಲ್ಲಿ ನೋಂದಣಿಯಾಗಿರುವ ಕಾರ್ಯಕರ್ತರ ಜೊತೆ ನೇರವಾಗಿ ಮಾತನಾಡಬಹುದು. ಈ ಆ್ಯಪ್ ಮೂಲಕ ಕಾರ್ಯಕರ್ತರ ನಂಬರನ್ನು ಬಳಸಿಕೊಂಡು ಈಗ ರಾಹುಲ್ ಗಾಂಧಿ ಛತ್ತೀಸ್‍ಗದದ ಸಿಎಂ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
Advertisement
Congress President Rahul Gandhi: We are taking inputs from different people in the party. We are taking inputs from MLAs, from workers. You will see a Chief Minister soon pic.twitter.com/TRTHcvCxCv
— ANI (@ANI) December 13, 2018
All India Congress Committee's observer for Chhattisgarh, Mallikarjun Kharge: All MLAs have unanimously authorised AICC President Rahul Gandhi to select Congress Legislative Party (CLP) leader (for Chhattisgarh). Whatever decision he takes, the MLAs are ready to accept pic.twitter.com/X5hkhSQFG3
— ANI (@ANI) December 13, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv