ತುಮಕೂರು: ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಘೋಷಣೆ ಕೂಗಿ ಶ್ರೀರಾಮನವಮಿ ಆಚರಿಸಿದ್ದಾರೆ.
ತುಮಕೂರು ನಗರದ ಭದ್ರಮ್ಮ ಸರ್ಕಲ್‍ನಲ್ಲಿ ಶಾಮಿಯಾನ ಹಾಕಿ ಕೋಸಂಬರಿ ಮತ್ತು ಪಾನಕ ಹಂಚಿದ್ದಾರೆ. ಈ ವೇಳೆ ಕಾಂಗ್ರೆಸ್‍ನ ಕೆಲ ಮುಸ್ಲಿಂ ಕಾರ್ಯಕರ್ತರೂ ಇದ್ದರು.
Advertisement
Advertisement
ಕಳೆದ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅವಹೇಳನ ಮಾಡುವ ಭರದಲ್ಲಿ ಯೂತ್ ಕಾಂಗ್ರೆಸ್‍ನವರು ಕೇಸರಿ ಶಾಲಿಗೆ ಕಪ್ಪು ಮಸಿ ಬಳಿದು ಸ್ವಾಮೀಜಿಗಳ ಸಮೂಹಕ್ಕೆ ಅಪಮಾನ ಮಾಡಿದ್ದರು. ಆದರೇ ಇಂದು ನಾವೂ ಹಿಂದೂಗಳು ಎಂದು ಕೂಗಿ ಕೇಸರಿ ಶಲ್ಯ ಮೇಲೆ ಪ್ರೀತಿ ತೋರಿದ್ದು ಮುಂಬರುವ ಚುನಾವಣೆಯ ಗಿಮಿಕ್ ಎಂಬಂತೆ ಭಾಸವಾಗುತ್ತಿದೆ.
Advertisement
Advertisement
ಕಾಂಗ್ರೆಸ್‍ನಿಂದ ಹಿಂದೆ ಕೇಸರಿ ಶಲ್ಯಕ್ಕೆ ಅಪಮಾನ ಆಗಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೂತ್ ಕಾಂಗ್ರೆಸ್ ಅಧ್ಯಕ್ಷ, ಯಾಕೆ ಬಿಜೆಪಿ ಅವರು ಮಾತ್ರ ಕೇಸರಿ ಶಲ್ಯದ ಪೇಟೆಂಟ್ ತೆಗೆದುಕೊಂಡಿದ್ದಾರಾ ಎಂದು ವಿಚಾರವನ್ನು ಡೈವರ್ಟ್ ಮಾಡಿ ಸುಮ್ಮನಾದರು.
ಪಾನಕ, ಕೋಸಂಬರಿ ತೆಗೆದುಕೊಳ್ಳಲು ಜನರೇ ಇಲ್ಲ: ಕೇವಲ ಪ್ರಚಾರದ ಉದ್ದೇಶದಿಂದಲೇ ಯೂತ್ ಕಾಂಗ್ರೆಸ್ ಕೇಸರಿ ಶಲ್ಯ ತೊಟ್ಟು ರಾಮನವಮಿ ಕಾರ್ಯಕ್ರಮ ಆಯೋಜಿಸಿತ್ತು. ರಾಮನವಮಿಯ ಪ್ರಮುಖ ಭಾಗ ಪಾನಕ ಮತ್ತು ಕೋಸಂಬರಿ ವಿತರಣೆ ಆಗಿತ್ತು. ವಿಪರ್ಯಾಸವೆಂದರೆ ಆ ವೇಳೆ ಯಾವೊಬ್ಬ ಸಾರ್ವಜನಿಕರೂ ಪಾನಕ-ಕೋಸಂಬರಿ ಸ್ವೀಕರಿಸಲು ಬಂದಿಲ್ಲ.