– ಮಾಜಿ ಸಂಸದ ಪ್ರತಾಪ್ ಸಿಂಹ ಮುಂದೆಯೇ ರಾಜ್ಯಪಾಲರ ವಿರುದ್ಧ ಘೋಷಣೆ
ಮೈಸೂರು: ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಬೆನ್ನಲ್ಲೇ, ಸಿದ್ದರಾಮಯ್ಯ (Siddaramaiah) ತವರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆದಿದೆ. ಮೈಸೂರಿನಲ್ಲಿ (Mysuru) ಸಿಎಂ ಪರವಾಗಿ ಪ್ರತಿಭಟನೆಗಳು ನಡೆದಿವೆ.
ಮೈಸೂರಿನ ಅಹಿಂದ ಸಂಘಟನೆಗಳು ಸಿಎಂ ಪರವಾಗಿ ಬೀದಿಗೆ ಇಳಿದವು. ಮೈಸೂರು ನ್ಯಾಯಾಲಯದ ಮುಂಭಾಗ ‘ಗೋ ಬ್ಯಾಕ್ ರಾಜ್ಯಪಾಲ’ ಎಂಬ ಪ್ರತಿಭಟನೆ ನಡೆಸಿದರು. ಈ ವೇಳೆ ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯಪಾಲರ ಪೋಸ್ಟರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ ನಾಯಕರ ಆಗ್ರಹ
ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ರಾಜ್ಯದ ಹೊಂದಾಣಿಕೆ ರಾಜಕಾರಣ ಕೊನೆ ಆಗಲು ಈ ಪ್ರಾಸಿಕ್ಯೂಷನ್ ವೇದಿಕೆ ಆಗಬೇಕು. ಸಿಎಂ ಕೂಡ ಬಿಜೆಪಿ ಮೇಲೆ ಮಾಡ್ತಿದ್ದ ಎಲ್ಲಾ ಹಗರಣಗಳನ್ನು ತನಿಖೆ ಮಾಡಿಸಲಿ. ಸಿಎಂ ಮೇಲಿನ ಪ್ರಾಸಿಕ್ಯೂಷನ್ ಕೂಡ ನಡೆಯಲಿ ಎಂದರು.
ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಮಾತಾಡುವಾಗ ಆಕಸ್ಮಿಕವಾಗಿ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಬಂದು ಬಿಜೆಪಿ ನಾಯಕನ ಎದುರೆ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಡುವೆ ಸೌಹಾರ್ದಯುತ ಮಾತುಕತೆಯು ನಡೆಯಿತು. ಇದನ್ನೂ ಓದಿ: ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?
ಮೈಸೂರಿನಲ್ಲಿ ನಾಳೆಯಿಂದ ಪರ-ವಿರೋಧ ಪ್ರತಿಭಟನೆಗಳು ಹೆಚ್ಚಾಗುವ ಕಾರಣ ಪ್ರಮುಖವಾದ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.