ಕೋಲಾರ: ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ (Congress) ಸರ್ವರ್ ಹ್ಯಾಕ್ ಮಾಡಿರಬಹುದು ಎಂದು ಸಂಸದ ಮುನಿಸ್ವಾಮಿ (Muniswamy) ಸಂಶಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ 135 ಸ್ಥಾನ ಗೆದ್ದಿದೆಯೇ? ಕೋಟಿಗಟ್ಟಲೆ ಹಣ ಅವರ ಬಳಿ ಇದೆ. ಕಾಂಗ್ರೆಸ್ ಗೆಲುವಿನ ಕುರಿತು ಸಂಶಯ ಇದೆ. ಇವಿಎಂ ಹ್ಯಾಕ್ ಮಾಡಿರುವ ರೀತಿಯೇ ವೆಬ್‍ಸೈಟ್ ಹ್ಯಾಕ್ ಮಾಡಿರಬಹುದು. ಅವರಿಗೆ ಯೋಗ್ಯತೆ ಇದ್ದರೆ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್
Advertisement
ಅಕ್ಕಿ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ ಶಿವಕುಮಾರ್ ಮಾತಾಡಿಕೊಂಡು ಅನ್ನಭಾಗ್ಯದ (Anna Baghya) 10 ಕೆಜಿ ಅಕ್ಕಿ ಭರವಸೆ ನೀಡಿದ್ದಾರೆ. ಪ್ರಧಾನಿ ಆಗಲಿ, ಆಹಾರ ಸಚಿವರ ಬಳಿಯಾಗಲಿ ಮಾತಾಡಿಕೊಂಡು ಭರವಸೆ ಕೊಟ್ಟಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.
Advertisement
ಅಕ್ಕಿಯಲ್ಲಿ ರಾಜಕೀಯ ಶುರು ಮಾಡಿರುವ ಕಾಂಗ್ರೆಸ್ ನಾಯಕರು ಮೊದಲು ಕೇಂದ್ರದ ಪಾಲು ಹೇಳುತ್ತಿರಲಿಲ್ಲ. ಈಗ 5 ಕೆ.ಜಿ ಅಕ್ಕಿ ಕೇಂದ್ರದ್ದು ಎಂದು ನಿಜ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಅವರಿಗೆ ಸರ್ವರ್ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ. ಕಳೆದ ಬಾರಿ ಇವಿಎಂನ್ನು ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು ಎಂದು ಕಿಡಿಕಾರಿದ್ದಾರೆ.
Advertisement
Advertisement
ಕಾಂಗ್ರೆಸ್‍ನವರ ಯೋಗ್ಯತೆ ಏನು ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಗೃಹ ಜ್ಯೋತಿಗೂ ಸಹ ಹಲವು ಷರತ್ತುಗಳನ್ನ ಹಾಕಿ ಮೋಸ ಮಾಡುತ್ತಿದ್ದಾರೆ. ಅಕ್ಕಿಯನ್ನು ಕಾಳ ಸಂತೆಯಲ್ಲಿ ಖರೀದಿ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ದಯವಿಟ್ಟು ನೀವು ಅಕ್ಕಿ ಕೊಡಿ, ಇಲ್ಲವಾದಲ್ಲಿ ಹಣದ ರೂಪದಲ್ಲಿ ಕೊಡಿ. ಅದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದಿದ್ದಾರೆ.
ಇದೇ ವೇಳೆ ಮಾಲೂರು ಶಾಸಕ ನಂಜೇಗೌಡರ ವಿರುದ್ಧ ಹರಿಹಾಯ್ದ ಅವರು, ಅನ್ ಎಜುಕೇಟೆಡ್ ಬಗ್ಗೆ ನಾನು ಮಾತನಾಡಲ್ಲ. ಸುತ್ತಮುತ್ತ ಅವರನ್ನು ಬೇರೆ ರೀತಿಯಲ್ಲೇ ಕರೆಯುತ್ತಾರೆ. ಅಕ್ಕಿಕಳ್ಳ, ಹಾಲು ಕಳ್ಳ, ಮಣ್ಣು ಕಳ್ಳ, ಕಲ್ಲು ಕಳ್ಳ ಎನ್ನುತ್ತಾರೆ. ಅವರಿಗೆ ತಾಕತ್ ಇದ್ದರೆ, ಅವರು ಏನು ಅಭಿವೃದ್ದಿ ಮಾಡಿದ್ದಾರೆ ಎಂದು ಹೇಳಲಿ. ಕೇಂದ್ರದ ಯೋಜನೆಗಳನ್ನು ನಮ್ಮದು ಎಂದು ಹೇಳಿಕೊಂಡು ಓಡಾಡುತ್ತಾರೆ. ನಾವು ಅಭಿವೃದ್ಧಿಗೆ ಕೊಟ್ಟ ಹಣವನ್ನ ಅವರು ತಡೆ ಹಿಡಿದಿದ್ದಾರೆ. ಕೋಲಾರಕ್ಕೆ ಅವರ ಕೊಡುಗೆಯ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಇನ್ನೂ ಡಿಸಿಸಿ ಬ್ಯಾಂಕ್‍ನಲ್ಲಿ ಸಾವಿರಾರು ನಕಲಿ ಸಂಘಗಳ ಸಾಲ ಮನ್ನಾಗೆ ಕಾಂಗ್ರೆಸ್ ತಂತ್ರ ರೂಪಿಸಿದೆ. ಡಿಸಿಸಿ ಬ್ಯಾಂಕ್ ಜೊತೆಗೆ ಕಾಂಗ್ರೆಸ್ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳ ಮೊಟ್ಟೆಗೆ ಕತ್ತರಿ ಹಾಕಿದ ಸರ್ಕಾರ