ದೇವೇಗೌಡರಿದ್ದ ವೇದಿಕೆಗೆ ನುಗ್ಗಿ ‘ಕೈ’ ಕಾರ್ಯಕರ್ತೆಯರಿಂದ ಹೈಡ್ರಾಮಾ!

Public TV
1 Min Read
TUMAKURU CONGRESS

ತುಮಕೂರು: ಬಿಜೆಪಿ (BJP) ಕಾರ್ಯಕ್ರಮದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತೆಯರು ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ಇಂದು ತುಮಕೂರಿನಲ್ಲಿ ನಡೆದಿದೆ.

ಕಾಂಗ್ರೆಸ್ ಕಾರ್ಯಕರ್ತೆಯರು ಮಾಜಿ ಪ್ರಧಾನಿ ದೇವೇಗೌಡರಿದ್ದ ವೇದಿಕೆಗೆ ನುಗ್ಗಿ ಕೆಲಕಾಲ ಗೊಂದಲ ಸೃಷ್ಟಿಸಿದರು. ಅಲ್ಲದೇ ಕುಮಾರಸ್ವಾಮಿ (HD Kumaraswamy) ಹಾಗೂ ದೇವೇಗೌಡರ (HD Devegowda) ವಿರುದ್ಧ ಘೋಷಣೆ ಕೂಗಿ ಹೈಡ್ರಾಮಾ ಮಾಡಿದರು. ಇದನ್ನೂ ಓದಿ: ಹೆಚ್‍ಡಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ತುಮಕೂರಿನ ಕುಂಚಿಟಿಗರ ಸಭಾಭವನದಲ್ಲಿ ಮೈತ್ರಿ ಸಮಾವೇಶ ನಡೆಯುತ್ತಿತ್ತು. ಕಾರ್ಯಕರ್ತೆಯರ ಸೋಗಿನಲ್ಲಿ ಇಬ್ಬರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಬಂದು ಸಭೆಯಲ್ಲಿ ಕೂತಿದ್ದರು. ಏಕಾಏಕಿ ಕುಮಾರಸ್ವಾಮಿಯವರ ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ಖಂಡಿಸಿ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಘೋಷಣೆ ಕೂಗಿದರು.

TUMAKURU CONGRESS 1

ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಎಂಟ್ರಿ ಕೊಟ್ಟು ಕಾಂಗ್ರೆಸ್ ಕಾರ್ಯಕರ್ತೆಯರನ್ನ ವಶಕ್ಕೆ ಪಡೆದರು.

Share This Article