ಕಾಂಗ್ರೆಸ್ ಇರುವುದೇ ಸಂವಿಧಾನ ರಕ್ಷಣೆಗೆ: ಜಾರಕಿಹೊಳಿ

Public TV
1 Min Read
sathish

ಕೊಪ್ಪಳ: ಬಿಜೆಪಿಗರು ಪದೇ-ಪದೇ ಸಂವಿಧಾನ ಬದಲಿಸುವ ಮಾತ್ನಾಡುತ್ತಾರೆ. ಆದರೆ ಕಾಂಗ್ರೆಸ್ ಇರುವುದೇ ಸಂವಿಧಾನ ರಕ್ಷಣೆಗೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಕೊಪ್ಪಳದ ಕುಷ್ಟಗಿಯಲ್ಲಿ ಇಂದು ಜರುಗಿದ ಸಂವಿಧಾನ ರಕ್ಷಣಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನಾ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸಿಗರು ಬೇರೆ-ಬೇರೆ ಕಡೆ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇದರಿಂದ ಸಂವಿಧಾನದ ಬಗ್ಗೆ ಜನರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಟಿಕ್‍ಟಾಕ್, ಪಬ್‍ಜಿ ಯುವಕರ ದಾರಿ ತಪ್ಪಿಸುತ್ತೆ – ಬ್ಯಾನ್ ಮಾಡಿದ ತಾಲಿಬಾನ್

BJP CONGRESS FLAG

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಶಾಸಕರು ಕ್ಷೇತ್ರ ಬಿಟ್ಟು ಕೊಡುವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯಮಟ್ಟದ ನಾಯಕರು. ಸಹಜವಾಗಿ ಶಾಸಕರು ನಮ್ಮ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರು ಬಂದರೆ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ ಅನ್ನೋ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ. ಇದೊಂದು ಟ್ರೆಂಡ್ ಆಗಿದೆ ಎಂದರು.

SIDDU 1

ಕಾಂಗ್ರೆಸ್‍ನಲ್ಲಿ ಸಿಎಂ ಕುರ್ಚಿಗೆ ಸ್ಪರ್ಧೆ ಇದೆ ಎನ್ನುವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲೂ ಐದಾರು ನಾಯಕರು ಸಿಎಂ ರೇಸ್‍ನಲ್ಲಿ ಇದ್ದಾರೆ. ಅದೇ ರೀತಿ ಕಾಂಗ್ರೆಸ್‍ನಲ್ಲೂ ಇದ್ದಾರೆ. ಇದು ಎಲ್ಲ ಪಕ್ಷದಲ್ಲೂ ಸಹಜ. ಇದೇನು ದೊಡ್ಡ ವಿಚಾರವಲ್ಲ. ಸಿಎಂ ಎನ್ನುವುದು ಚುನಾವಣೆ ನಂತರ ನಿರ್ಧಾರವಾಗುತ್ತದೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಹೊರಬರುತ್ತಿರುವ ಅಕ್ರಮ ವಿಚಾರಗಳ ಬಗ್ಗೆ ಮಾತನಾಡಿದ ಅವರು, ಎಲ್ಲ ಅಕ್ರಮದಲ್ಲೂ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಈಗ ಒಂದೊಂದು ಹೊರಬರುತ್ತಿದೆ. ಇದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ದೆಹಲಿಯಿಂದ ಹಿಡಿದು ಹಳ್ಳಿವರೆಗೂ ಈ ಕೆಲಸ ನಡೆದಿದೆ ಎಂದರು.

BJP Flag Final 6

ಬಲಪಂಕ್ತಿಯ ವಿಚಾರ ಇರುವವರನ್ನು ಉನ್ನತ ಹುದ್ದೆಗೆ ತರಲಾಗುತ್ತಿದೆ. ಇದು ದೇಶದಲ್ಲಿ ಮನುವಾದವನ್ನು ಬಿತ್ತುವ ಹುನ್ನಾರವಾಗಿದ್ದು, ಅದು ನಮ್ಮ ದೇಶದಲ್ಲಿ ಸಾಧ್ಯವಾಗುವುದಿಲ್ಲ ಎಂದರು. ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಸರಳ ಟಿಪ್ಸ್ 

Share This Article
Leave a Comment

Leave a Reply

Your email address will not be published. Required fields are marked *