ಬೆಂಗಳೂರು: ಕಾಂಗ್ರೆಸ್ (Congress) ಪಕ್ಷ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನೀಡಿದ್ದಾರೆ ಎಂದು ಸಚಿವ ಅಶೋಕ್ (R Ashok) ಕಿಡಿಕಾರಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ 500 ರೂ. ಕೊಟ್ಟು ಕರೆದುಕೊಂಡು ಬನ್ನಿ ಎಂಬ ವೀಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. 50 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ಸರ್ಕಾರ ನಡೆಸಿದೆ ಎಂಬುದು ಬಟಾಬಯಲಾಗಿದೆ. ಯಾರು ಯಾವ ರೀತಿ ಇಷ್ಟು ದಿನ ಗೆದ್ದರು ಮತ್ತು ಆಡಳಿತ ನಡೆಸಿದರು ಎಂಬುದು ಗೊತ್ತಾಗಿದೆ. ಇದು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದರು.
ನಮಗೆ ವೋಟ್ ಹಾಕಿ ಸದನಕ್ಕೆ ಕಳುಹಿಸುವವರಿಗೆ ಮಾಡಿದ ಅವಮಾನ. ಇವರು ಕಾರ್ಯಕ್ರಮಕ್ಕೆ 500 ರೂ. ಕೊಟ್ಟರೆ ವೋಟ್‌ಗೆ ಎಷ್ಟು ಹಣ ಕೊಡುತ್ತಾರೆ? ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡಲು ಕಾಂಗ್ರೆಸ್ ಸಿದ್ದವಿದೆ ಎಂದರೆ ಇವರು ರಾಜ್ಯ ಮತ್ತು ದೇಶವನ್ನು ಎಷ್ಟು ಲೂಟಿ ಮಾಡಿದ್ದಾರೆ? ರಮೇಶ್ ಕುಮಾರ್ ಅವರು ನೇರವಾಗಿ ಮಾತನಾಡುವವರು. ಅವರು 3 ತಲೆಮಾರಿಗೆ ಆಗುವಷ್ಟು ಸಂಪಾದನೆ ಮಾಡಿದ್ದಾರೆ ಎಂದು ಹೇಳಿದ್ದರು. ಈಗ ಅದು ಸತ್ಯವಾಗಿದೆ ಎಂದರು. ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಕ್ಸಮರ – ದಂಗಾದ ಸುಧಾಕರ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ಅಮಿತ್ ಶಾ ಹೇಳಿದ್ದರು. ಅದಕ್ಕೆ ಪಕ್ಕಾ ಸಾಕ್ಷಿ ಸಿಕ್ಕಿದೆ. ಇವರು ಅಧಿಕಾರಕ್ಕೆ ಬಂದರೆ ಜನರ ತೆರಿಗೆ ಹಣ ಲೂಟಿ ಹೊಡಿಯುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ