ಬಡತನದ ಮೇಲೆ ಸರ್ಜಿಕಲ್ ಸ್ಟ್ರೈಕ್: ರಾಹುಲ್ ಗಾಂಧಿ

Public TV
1 Min Read
Rahul Gandhi

– ಬಿಜೆಪಿ ಆಡಳಿತದಲ್ಲಿ ಶ್ರೀಮಂತರು ಕನಸು ಕಾಣ್ತಾರೆ

ಜೈಪುರ: ಕಾಂಗ್ರೆಸ್ ಅಧಿಕಾರ ಬಂದ ಮೇಲೆ ಬಡತನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿದೆ. ಕಳೆದ ಆರು ತಿಂಗಳಿನಿಂದ ಬಡತನ ನಿರ್ಮೂಲನೆಯ ಕುರಿತಾಗಿ ಪಕ್ಷದಲ್ಲಿ ಚರ್ಚಿಸಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಸೂರತಘಡನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಸರ್ಕಾರ ಬಂದ ಕೂಡಲೇ ಕನಿಷ್ಠ ಆದಾಯವನ್ನು ನೀಡಲು ನಿರ್ಧರಿಸಲಾಗಿದೆ. ದೇಶದಿಂದ ಬಡತನ ನಿರ್ಮೂಲನೆ ಮಾಡಲು ಪಣ ತೊಡಲಾಗಿದ್ದು, ಅದಕ್ಕಾಗಿ ಸೂಕ್ತ ಸಮಯ ಬಂದಿದೆ. ಇತಿಹಾಸದಲ್ಲಿಯೇ ಇಂತಹ ನಿರ್ಣಯವನ್ನು ಯಾವ ದೇಶವೂ ತೆಗೆದುಕೊಂಡಿಲ್ಲ. ಇಷ್ಟಲ್ಲದೇ ಪಕ್ಷ ನಿರುದ್ಯೋಗದ ಪ್ರಮಾಣವನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿದ್ಧಗೊಂಡಿದೆ ಎಂದರು.

ಮೋದಿ ಸರ್ಕಾರ ಶ್ರೀಮಂತರಿಗೆ ಮಾತ್ರ ಹಣ ಎಂಬಂತಾಗಿತ್ತು. ಇದೀಗ ಕಾಂಗ್ರೆಸ್ ಬಡವರಿಗೆ ಹಣ ನೀಡಲು ಮುಂದಾಗುವಂತಹ ಯೋಜನೆಯ ನೀಲ ನಕ್ಷೆಯನ್ನು ನಿಮ್ಮ ಮುಂದೆ ಇರಿಸಿದೆ. ಮೋದಿ ಆಡಳಿತದಲ್ಲಿ ಕೇವಲ ಶ್ರೀಮಂತರು ಕನಸು ಕಾಣುವಂತಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರು ಸಹ ನೆಮ್ಮದಿಯ ಜೀವನದ ಜೊತೆಗೆ ಕನಸು ಕಾಣಬಹುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ಇದನ್ನೂ ಓದಿ: ಭಾರತದಲ್ಲಿ ಬಡತನ ಇನ್ನೂ ಇರಲು ಕಾಂಗ್ರೆಸ್ ಕಾರಣ : ರಕ್ಷಣಾ ಸಚಿವೆ ಕಿಡಿ

ಕಪ್ಪು ಹಣ ಹೊಂದಿರುವ ಜನರಿಗೆ ಮೋದಿ ಸಹಾಯ ಮಾಡುತ್ತಿದ್ದು, ಯುಪಿಎ ಆಡಳಿತಾವಧಿಯಲ್ಲಿ ಬಡತನದಿಂದ ಮೇಲೆ ಬಂದಿದ್ದ ವರ್ಗದವರನ್ನು ಕಳೆದ ಐದು ವರ್ಷಗಳಲ್ಲಿ ಮತ್ತೆ ಕೆಳಗೆ ತಳ್ಳಲಾಗಿದೆ. ಯುಪಿಎ ಆಡಳಿತಾವಧಿಯಲ್ಲಿ 14 ಕೋಟಿ ಜನರನ್ನು ಬಡತನದಿಂದ ಮೇಲೆ ತರಲಾಗಿತ್ತು. ದೇಶದಲ್ಲಿ ಇನ್ನು 25 ಕೋಟಿಯಷ್ಟು ಬಡವರಿದ್ದಾರೆ. ಬೆಲೆ ನಿಯಂತ್ರಣ ಸೇರಿದಂತೆ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವಂತೆ ಮಾಡಲು ಕಾಂಗ್ರೆಸ್ ಹಲವು ಯೋಜನೆಗಳನ್ನು ಜಾರಿಗೊಳಿಸಲು ಸಿದ್ಧವಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *