ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ – ಗೋವಿಂದ ಕಾರಜೋಳ

Public TV
2 Min Read
Govind Karjola

– ಮೂರು ತಿಂಗಳಿಂದ `ಗೃಹಲಕ್ಷ್ಮಿ’ ಬಂದಿಲ್ಲ ಎಂದ ಸಂಸದ

ಬೆಳಗಾವಿ: ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ ಎಂದು ಸಂಸದ ಗೋವಿಂದ ಕಾರಜೋಳ (Govind Karjol) ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬಂದು ಎರಡು ವರ್ಷ ಆಯ್ತು. ಭಂಡತದನದಿಂದ ಐದು ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಆದರೆ ಈಗ ಗ್ಯಾರಂಟಿ ಹಣವನ್ನೂ ಕೊಡ್ತಿಲ್ಲ. ಗೃಹಲಕ್ಷ್ಮಿ ಹಣ ಮೂರು ತಿಂಗಳಿಂದ ಖಾತೆಗೆ ಜಮೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಭಾರತ, ಚೀನಾಕ್ಕೆ ಸುಂಕ ವಿಧಿಸುತ್ತೇವೆ – ಪುನರುಚ್ಚರಿಸಿದ ಟ್ರಂಪ್‌

ಯಾವ ಗ್ಯಾರಂಟಿಯೂ ಸ್ಮಾರ್ಟ್ ಇಲ್ಲ, ಬೋಗಸ್ ಹೇಳಿ ವೋಟ್ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಬಾರಿ ಬಜೆಟ್ ಮಂಡನೆ ಮಾಡಿದ್ದರ ಪೈಕಿ ಒಂದೂವರೆ ಲಕ್ಷ ಕೋಟಿ ಹಣ ಬಾಕಿ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ದಿನನಿತ್ಯ ಕೊಲೆ ಸುಲಿಗೆ ಆಗುತ್ತಿವೆ. ಬೇರೆ ರಾಜ್ಯದವರು ಬಂದು ಕಳ್ಳತನ ಮಾಡ್ತಿದ್ದಾರೆ. ಜನರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ. ಪುಂಡರ ಹಾವಳಿ ಜಾಸ್ತಿ ಆಗಿದೆ. ಸರ್ಕಾರದ ಹಿಡಿತ ತಪ್ಪಿ ಹೋಗಿದ್ದು, ಸಿದ್ದರಾಮಯ್ಯ ಎಲ್ಲದರಲ್ಲೂ ವಿಫಲರಾಗಿದ್ದಾರೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅತಿ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ಇದೇನಾ ಇವರು ನುಡಿದಂತೆ ನಡೆದಿದ್ದು? ನಾಡಿನ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿಯಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ನಾಡಿನ ಜನ ಸಂಕಷ್ಟದಲ್ಲಿದ್ದು, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೂಡಲೇ ಇವರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕು ಎಂದು ಹರಿಹಾಯ್ದರು.

ಪಾರ್ಟಿ ಅಧ್ಯಕ್ಷ ಡಿಸಿಎಂಗೆ ಕಿರೀಟ ಇದೆಯಾ ಎಂದು ರಾಜಣ್ಣ ಕೇಳುತ್ತಿದ್ದಾರೆ. ನಾಲ್ಕು ಗುಂಪಾಗಿ ಅಧಿಕಾರಕ್ಕಾಗಿ ರಣ ಹದ್ದುಗಳ ರೀತಿ ಕಚ್ಚಾಡುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಹೌದು ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶ ಇದೆ. ಖರ್ಗೆ ಅವರು ಯಾರನ್ನಾದರೂ ಮಾಡಲಿ, ದಲಿತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಪರಮೇಶ್ವರ್, ಮುನಿಯಪ್ಪ ಅವರನ್ನು ಮಾಡಬೇಕು. ಇಲ್ಲವಾದರೆ ಖರ್ಗೆ ಅವರೇ ದಲಿತ ಸಿಎಂ ಆಗಲಿ ಎಂದು ಅಭಿಪ್ರಾಯಪಟ್ಟರು.ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾಲಯದಿಂದ ಸಂಗಪ್ಪ ವಗ್ಗರ್‌ಗೆ ಡಾಕ್ಟರೇಟ್ ಪದವಿ

Share This Article