ನವದೆಹಲಿ: ಮುಖ್ಯಮಂತ್ರಿಯಾಗುವ (Chief Minister) ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ (DK Shivakumar) ಅವರನ್ನು ಕಾಂಗ್ರೆಸ್ ಹೊರಹಾಕುತ್ತದೆ ಎಂದು ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ(Shehzad Poonawalla) ಸ್ಫೋಟಕ ಆರೋಪ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಕಡೆಯ ದಿನಗಳ ಬಂದಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಮೊದಲು ಡಿಕೆ ಶಿವಕುಮಾರ್ ನಿಷ್ಠರನ್ನು ಹೊರಹಾಕುತ್ತಾರೆ. ನಂತರ ಅವರನ್ನು ಹೊರಹಾಕುತ್ತಾರೆ. ಸಿಎಂ ಆಗುವುದನ್ನು ಮರೆತುಬಿಡಿ ಅವರು ಡಿಸಿಎಂ ಆಗಿ ಉಳಿಯುವುದಿಲ್ಲ. ಈ ಯೋಜನೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ. ಇದು ಕಾಂಗ್ರೆಸ್ (Congress) ಪಕ್ಷದ ಖಾತಾ ಕಟ್ ಲೂಟಿ ಮಾದರಿ. ಕಾಂಗ್ರೆಸ್ ಹೋದಲ್ಲೆಲ್ಲಾ ಲೂಟಿ ಹೊಡೆಯತ್ತಿದೆ. ಆರ್ಥಿಕತೆಯನ್ನು ವಿನಾಶದ ಅಂಚಿಕೆ ತೆಗೆದುಕೊಂಡು ಹೋಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಾಲಿನ ದರ 10 ರೂ. ಹೆಚ್ಚಳಕ್ಕೆ ಬೇಡಿಕೆ ಇದೆ: ಸಚಿವ ವೆಂಕಟೇಶ್
Advertisement
ಕರ್ನಾಟಕದಲ್ಲಿ ನೀರು, ಪೆಟ್ರೋಲ್, ಡೀಸೆಲ್, ಹಾಲು ಮತ್ತು ಎಲ್ಲದರ ದರ ಹೆಚ್ಚಳವಾಗಿದೆ. ಇದರ ಜೊತೆಗೆ ನಾನಾ ರೀತಿಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಉಚಿತ ಬಸ್ ಪ್ರಯಾಣದ ಭರವಸೆ ನೀಡಿದ್ದಾರೆ, ಬೇರೆ ಮೂಲದಿಂದ ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು.
Advertisement
ಮುಡಾ ಹಗರಣ, ವಾಲ್ಮೀಕಿ ಹಗರಣ ಮತ್ತು ನಕಲಿ ಗ್ಯಾರಂಟಿಗಳಂತಹ ಹಗರಣಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಅದೇ ಉದ್ದೇಶದಿಂದ ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಇನ್ನು ಮೂರು ತಿಂಗಳಲ್ಲಿ ಕರ್ನಾಟಕ ಕಾಂಗ್ರೆಸ್ 48,000 ಕೋಟಿ ರೂಪಾಯಿ ಸಾಲ ಮಾಡಲಿದೆ. ಇದು ಸರ್ಕಾರದ ಪರಿಸ್ಥಿತಿ. ಸಿದ್ದರಾಮಯ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲ, ಎಲ್ಲವೂ ನಾಶವಾಗಿದೆ ಎಂದು ಆಕ್ರೋಶ ಹೊರಹಾಕಿದರು.