ಕಾರವಾರ: ಕಾಂಗ್ರೆಸ್ ವೋಟಿಗೋಸ್ಕರ ಧರ್ಮವನ್ನ ಉಪಯೋಗಿಸುತ್ತೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟೀಕಿಸಿದ್ದಾರೆ
ತಾಲೂಕಿನ ಬಂಗಾರಮಕ್ಕಿ ಶ್ರೀ ಕ್ಷೇತ್ರ ವೀರಾಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಜಾತಿ-ಧರ್ಮ ಹುಡುಕೋದೇ ಅವರ ಹಣೆಬರಹ. ಕಾಂಗ್ರೆಸ್ ಓಟಿಗೋಸ್ಕರ ಧರ್ಮವನ್ನು ಉಪಯೋಗಿಸುತ್ತೆ. ಮಕ್ಕಳಿಗೆ ಕೊಡುವ ಪಠ್ಯಪುಸ್ತಕ ಸರಿಯಾಗಿರಬೇಕು. ಕಸ್ತೂರಿ ರಂಗನ್ ನೇತೃತ್ವದಲ್ಲಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡ್ತಾರೆ. ಅವರ ಜೊತೆ ಇದ್ದಾಗ ಇವರು ಏನು ಮಾಡಿದ್ದರು ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಡವರ ಆಹಾರ ಇಂದಿನ ದಿನಗಳಲ್ಲಿ ಶ್ರೀಮಂತರ ಆಹಾರವಾಗಿದೆ: ಬಿ.ಸಿ.ಪಾಟೀಲ್
Advertisement
Advertisement
ಪಠ್ಯ ಪುಸ್ತಕ ಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪಠ್ಯ ಪುಸ್ತಕ ಈಗಾಗಲೇ 82 ಶೇ. ಪೂರೈಕೆಯಾಗಿದೆ. ಕಳೆದ ಸಲ ಈ ವಿಷಯ ಏಕೆ ಟೀಕೆಗೊಳಗಾಗಿಲ್ಲ. ಯಾವುದೇ ಪಠ್ಯಪುಸ್ತಕ ಕ್ರಮ 20 ರಿಂದ 15 ವರ್ಷ ಇರುತ್ತೆ. ಕಾಲಕಾಲಕ್ಕೆ ಅವಶ್ಯಕತೆಗನುಗುಣವಾಗಿ ಪಠ್ಯಕ್ರಮ ರಚನೆಯಾಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬರುವ ಮುನ್ನ ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ್
Advertisement
Advertisement
2015ರಲ್ಲಿ ಆದ ಪಠ್ಯಕ್ರಮ 2017ರಲ್ಲಿ ಏಕೆ ಆಯಿತು ಎಂದು ಪ್ರಶ್ನಿಸಿದ ಅವರು, ಪ್ರತಿಸಲ ಪಠ್ಯಕ್ರಮದಲ್ಲಿ ಇರುವ ಅಲ್ಪಸ್ವಲ್ಪ ತಪ್ಪುಗಳನ್ನು ಸರಿಪಡಿಸಲು ಸಮಿತಿ ನಿರ್ಮಾಣವಾಗಿರುತ್ತೆ. ಕಾಂಗ್ರೆಸ್ ಅವರಿಗೆ ಬಿಜೆಪಿಯವರನ್ನು ಟೀಕೆ ಮಾಡುವುದು ಕೆಟ್ಟ ಅಭ್ಯಾಸ. ಕಾಂಗ್ರೆಸ್ ಗೆ ರೂಲಿಂಗ್ ಪಾರ್ಟಿ ಮಾಡಿ ರೂಢಿಯಾಗಿದೆ ಹೊರತು ಪ್ರತಿಪಕ್ಷ ಸ್ಥಾನದಲ್ಲಿನ ನಡತೆ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆಯ ಹುತಾತ್ಮ ಅಧಿಕಾರಿ, ಸಿಬ್ಬಂದಿಗೆ ಗೌರವ ನಮನ ಸಲ್ಲಿಕೆ
ಶಾಲೆ ಪ್ರಾರಂಭದ ಬಗ್ಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿದ್ದು, ಯಶಸ್ವಿಯಾಗಿದ್ದೇವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಇಲ್ಲದೇ ಒಂದನೇ ತರಗತಿ ಪ್ರಾರಂಭಿಸುವುದಿಲ್ಲ. ಈಗಾಗಲೇ ಒಂದರಿಂದ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.